ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 62 ರೂ. ಏರಿಕೆ
ನವದೆಹಲಿ: ದೀಪಾವಳಿ ಹಬ್ಬದ ದಿನವೇ ತೈಲ ಕಂಪೆನಿಗಳು ಗ್ರಾಹಕರಿಗೆ ಶಾಕ್ ನೀಡಿದ್ದು, 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯಲ್ಲಿ 62 ರೂ. ಹೆಚ್ಚಿಸಿದೆ.
ತೈಲ ಕಂಪೆನಿಗಳು ಬಿಡುಗಡೆಮಾ ಡಿರುವ ದೂರುಗಳ ಪ್ರಕಾರ ಈ ಗ್ಯಾಸ್ ಸಿಲಿಂಡರ್‌ಗಳು ಈಗ ಜನರಿಗೆ 62 ರೂ.ಗಳಷ್ಟು ದುಬಾರಿಯಾಗಲಿದೆ. ಆದರೆ ಇದೇ ಸಂದರ್ಭದಲ್ಲಿ 14 ಕೆಜಿ ಗೃಹಬಳಕೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗದಿರುವುದು ಸಮಾಧಾನದ ಸಂಗತಿಯಾಗಿದೆ. ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆ ಹೆಚ್ಚಿಸಿರುವುದು ಹೋಟೆಲ್ ಹಾಗೂ ಇತರ ಸಂಸ್ಥೆಗಳಿಗೆ ಶಾಕ್ ನೀಡಿದೆ. ಇದರ ಪರಿಣಾಮ ಹೋಟೆಲ್‌ಗಳಲ್ಲಿ ಆಹಾರ ಪದಾ ರ್ಥಗಳ ಬೆಲೆ ಏರುವ ಸಾಧ್ಯತೆಯೂ ಇದೆ. ಇದೇ ಸಂದರ್ಭದಲ್ಲಿ ಇನ್ನೊಂದೆಡೆ ತೈಲ ಕಂಪೆನಿಗಳು ಜೆಟ್ ಇಂಧನ ಬೆಲೆಯನ್ನೂ ಏರಿಸಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ವಿಮಾನ ಟಿಕೆಟ್ ದರವೂ ದುಬಾರಿ ಯಾಗಲಿದೆ. ಅಂದರೆ ಎಟಿಎಫ್ (ಜೆಟ್ ಇಂಧನ) ಬೆಲೆಯನ್ನು ಸುಮಾರು ಮೂರು ಸಾವಿರ ರೂಪಾ ಯಿಗಳಷ್ಟು ಹೆಚ್ಚಿಸಲಾಗಿದೆ. ಹೊಸ ದರಗಳನ್ನು ಇಂದಿನಿಂದಲೇ ಅನ್ವಯ ಗೊಳ್ಳುವಂತೆ ಜ್ಯಾರಿಗೊಳಿಸಲಾಗಿದೆ.