ವಾಣೀನಗರ, ದೇಶಮೂಲೆ, ಈಳಂತೋಡಿ ಮತ್ತು ಪಳ್ಳತ್ತಮೂಲೆ ವಿದ್ಯುತ್ ವೋಲ್ಟೇಜ್ ಸಮಸ್ಯೆ ಬಗೆಹರಿಸಬೇಕು-ಸಿಪಿಐ
ಪೆರ್ಲ: ಎಣ್ಮಕಜೆ ಪಂಚಾಯ ತ್‌ನ ಏಳನೇ ವಾರ್ಡ್‌ಗೊಳಪಟ್ಟ ವಾಣಿನಗರ, ದೇಶಮೂಲೆ, ಈಳಂತೋಡಿ, ಪಳ್ಳತ್ತಮೂಲೆ ಭಾಗದ ರೈತರು ಸಹಿತ ಸಾರ್ವಜನಿಕರು ಹಲವು ತಿಂಗಳುಗಳಿಂದ ವಿದ್ಯುತ್ ವೋಲ್ಟೇಜ್ ಸಮಸ್ಯೆ ಎದುರಿಸುತ್ತಿ ದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ಈ ಭಾಗದಲ್ಲಿ ನೂತನ ಟ್ರಾನ್ಸ್‌ಫಾರ್ಮರ್ ಸ್ಥಾಪಿಸಬೇಕು ಮತ್ತು ಸಿಂಗಲ್ ಲೈನ್ ವ್ಯವಸ್ಥೆಯನ್ನು ತ್ರೀಫೇಸ್ ಲೈನ್‌ಗಳಾಗಿ ಪರಿವರ್ತಿ ಸಬೇಕು ಎಂದು ವಾಣಿನಗರದಲ್ಲಿ ನಡೆದ ಸಿಪಿಐ ವಾಣಿನಗರ ಬ್ರಾಂಚ್ ಸಮ್ಮೇಳನ ಸಂಬಂಧಪಟ್ಟವರನ್ನು ಒತ್ತಾಯಿಸಲು ತೀರ್ಮಾನಿಸಿದೆ.
ವಾಣಿನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಾಶ್ವತ ವೈದ್ಯಾಧಿಕಾರಿಯನ್ನು ನೇಮಿಸಬೇಕು, ಲ್ಯಾಬ್ ವ್ಯವಸ್ಥೆ ಮಂ ಜೂರುಗೊಳಿಸಿ ಲ್ಯಾಬ್ ಟೆಕ್ನೀಶಿಯನ್ ನೇಮಕಗೊಳಿಸ ಬೇಕೆಂದು ಸಮ್ಮೇಳನ ಠರಾವು ಅಂಗೀ ಕರಿಸಿತು. ಪಕ್ಷದ ಹಿರಿಯ ನೇತಾರ ನಾರಾಯಣ ನಾಯ್ಕ್ ಕುತ್ತಾಜೆ ಧ್ವಜಾರೋಹಣ ಗೈದರು. ಸಿಪಿಐ ಬದಿಯಡ್ಕ ಮಂಡಲ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಉದ್ಘಾಟಿಸಿದರು. ಸಂಜೀವ ರೈ ನಾಯರ್‌ಬಾಳಿಗೆ ಅಧ್ಯಕ್ಷತೆ ವಹಿಸಿದರು. ಸಂತಾಪ ಸೂಚಕ, ಚಟುವಟಿಕಾ ವರದಿ, ಚರ್ಚೆ ನಡೆಯಿತು. ಎಣ್ಮಕಜೆ ಲೋಕಲ್ ಕಾರ್ಯದರ್ಶಿ ಈಶ್ವರ ಪ್ರಸಾದ್ ಪಂಬತ್ತಡ್ಕ, ಸಮಿತಿ ಸದಸ್ಯರುಗಳಾದ ಎಸ್.ಬಿ. ನರಸಿಂಹ ಪೂಜಾರಿ, ರವಿ ವಾಣಿನಗರ, ರಾಮಚಂದ್ರ ಎಂ, ರವಿ ಕೆ, ಚಂದ್ರಾವತಿ ಎಂ ಮೊದಲಾದವರು ಉಪಸ್ಥಿತರಿದ್ದರು. ಸಮ್ಮೇಳನವು ನೂತನ ಬ್ರಾಂಚ್ ಕಾರ್ಯದರ್ಶಿಯಾಗಿ ರವೀಂದ್ರ ಮಣಿಯಾಣಿ ಮತ್ತು ಸಹ ಕಾರ್ಯದರ್ಶಿ ಯಾಗಿ ಸಂಜೀವ ರೈ ನಾಯರ್ ಬಾಳಿಗೆ ಅವರನ್ನು ಆರಿಸಲಾಯಿತು.