ವಾಣೀನಗರ: ಮಿಲ್ಮಾ ವತಿಯಿಂದ ನಿರ್ಮಿಸಿದ ಮನೆಯ ಕೀಲಿಕೈ ಹರಿಣಾಕ್ಷಿಗೆ ಹಸ್ತಾಂತರ
ಪೆರ್ಲ: ಕೇರಳದಲ್ಲಿ 46 ವರ್ಷ ಗಳಿಂದ ಕಾರ್ಯಾಚರಿಸುತ್ತಿರುವ ಮಿಲ್ಮಾ 10.5 ಲಕ್ಷಕ್ಕೂ ಹೆಚ್ಚು ಹೈನುಗಾರರ ಉದ್ಯಮ ಸಂಸ್ಥೆಯಾಗಿದೆ. ರಾಜ್ಯದಲ್ಲಿ ಕ್ಷೀರಾಭಿವೃದ್ಧಿಗೆ ಮಿಲ್ಮಾ ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಈ ಸವಲತ್ತುಗಳ ಪ್ರಯೋಜನ ಎಲ್ಲರೂ ಪಡೆಯಬೇಕು ಎಂದು ಮಿಲ್ಮಾ ಅಧ್ಯಕ್ಷ ಕೆ.ಎಸ್.ಮಣಿ ಹೇಳಿ ದರು. ಮಲಬಾರ್ ಮಿಲ್ಮಾ ಸಹಕಾರಿ ಕ್ಷೀರೋತ್ಪಾದಕ ಯೂನಿಯನ್ ಅಂಗ ಸಂಸ್ಥೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕ್ಷೀರ ಕೃಷಿಕರಿಗೆ ಮನೆ ನಿರ್ಮಿಸಿ ಕೊಡುವ ಯೋಜನೆಯಂತೆ ಜಿಲ್ಲೆ ಯಿಂದ ಆಯ್ಕೆಯಾಗಿ ಮನೆ ನಿರ್ಮಾ ಣ ಪೂರ್ತಿಗೊಳಿಸಿದ ಹರಿಣಾಕ್ಷಿಯ ವರ ಮನೆಯ ಕೀಲಿಕೈ ಹಸ್ತಾಂತರಿಸಿ ಅವರು ಮಾತನಾಡಿದರು.
ಮಿಲ್ಮಾ ಫೆಡರೇಶನ್ ಕಳೆದ ಒಂದು ವರ್ಷದಲ್ಲಿ ಹೈನುಗಾರರಿಗಾಗಿ 49 ಕೋಟಿ ರೂ.ವಿವಿಧ ರೀತಿಯಲ್ಲಿ ವ್ಯಯಿಸಿದೆ. ಪಶು ಆಹಾರ, ಸೈಲೇಜ್, ಜೋಳದ ದಂಟು ಇತ್ಯಾದಿಗೆ 25 ಕೋಟಿ ರೂ. ಸಬ್ಸಿಡಿ ನೀಡಲಾಗಿದೆ. ಪ್ರತಿ ಚೀಲ ಪಶು ಆಹಾರಕ್ಕೆ 250-300 ಸಬ್ಸಿಡಿ ನೀಡಲಾಗುತ್ತಿದೆ. ಮಿಲ್ಮಾ ಕ್ಷೀರ ಗೃಹ ಯೋಜನೆಯಂತೆ ಮಲಬಾರ್ ಪ್ರದೇಶದ ಆರು ಜಿಲ್ಲೆಗಳಿಂದ ಆಯ್ದ ಬಡ ಹೈನುಗಾರರಿಗೆ 36 ಮನೆ ನಿರ್ಮಿಸಿ ಕೊಟ್ಟಿದೆ. ಒಂದು ಮನೆಗೆ ತಲಾ 5 ಲಕ್ಷ ರೂ.ಗಳಂತೆ ಮಿಲ್ಮಾ ನೀಡಿದೆ. ಈ ಆರ್ಥಿಕ ವರ್ಷದಲ್ಲಿ 13 ಕ್ಷೀರ ಕೃಷಿಕರಿಗೆ ಮನೆ ನಿರ್ಮಿಸಿ ಕೊಡಲಾಗಿದ್ದು ಇದರಲ್ಲಿ ಇಬ್ಬರನ್ನು ಕಾಸರಗೋಡು ಜಿಲ್ಲೆಯಿಂದ ಆಯ್ಕೆ ಮಾಡಲಾಗಿದೆ ಎಂದರು. ಎಣ್ಮಕಜೆ ಪಂ. ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಹೈನುಗಾರರಿಗೆ ವಿವಿಧ ಯೋಜನೆಗಳ ಮೂಲಕ ಸಬ್ಸಿಡಿ ಸಹಿತ ಅನೇಕ ಸೌಲ ಭ್ಯಗಳನ್ನು ಪಂಚಾಯತ್ ನೀಡುತ್ತಾ ಬಂದಿದೆ. ಅನೇಕ ಯೋಜನೆಗಳನ್ನು ಸಿದ್ಧಪಡಿಸುತ್ತಿದೆ. ಹಲವು ಯೋಜ£ ೆಗಳಿಗೆ ಫಲಾನುಭವಿಗಳೇ ಇಲ್ಲದ ಸ್ಥಿತಿಯೂ ಇದೆ. ಹೈನುಗಾರರು ಸವಲತ್ತುಗಳ ಪ್ರಯೋಜನ ಪಡೆದು ಕ್ಷೀರೋದ್ಯಮವನ್ನು ಬೆಳೆಸಿ ಕ್ಷೀರೋತ್ಪಾದಕ ಸಂಘಗಳನ್ನು ಅಭಿವೃದ್ಧಿಪಡಿಸಲು ಯತ್ನಿ ಸಬೇಕು ಎಂದರು.
ಜಿಲ್ಲಾ ಯೂನಿಟ್ ಮುಖ್ಯಸ್ಥ ಶಾಜಿ ವಿ. ಮಿಲ್ಮಾದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಮಿಲ್ಮಾ ನಿರ್ದೇಶಕ ಪಿ.ಪಿ.ನಾರಾಯಣನ್ ಶೈಕ್ಷಣಿಕ ಧನ ಸಹಾಯ ವಿತರಿಸಿದರು. ಮಂಜೇಶ್ವರ ಬ್ಲಾಕ್ ಪಂ.ಸದಸ್ಯ ಬಟ್ಟು ಶೆಟ್ಟಿ ಮಿಲ್ಮಾ ಸಪೋರ್ಟ್ ಆರ್ಥಿಕ ಸಹಾಯ ವಿತರಿಸಿದರು. ಪಂ. ಸದಸ್ಯರಾದ ರಾಮಚಂದ್ರ ಎಂ., ನರಸಿಂಹ ಪೂಜಾರಿ ಎಸ್.ಬಿ., ಮಂಜೇಶ್ವರ ಬ್ಲಾಕ್ ಡಿ.ಇ.ಒ.ಅಜಯನ್ ಎಸ್., ಪೆರ್ಲ ಕ್ಷೀರೋತ್ಪಾದಕ ಸಂಘದ ಕಾರ್ಯದರ್ಶಿ ಚೇತನ ಕೆ. ಶುಭ ಹಾರೈಸಿದರು.
ಎಣ್ಮಕಜೆ ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಬೀರ್, ಪಡ್ರೆ ಕ್ಷೀರೋತ್ಪಾದಕ ಸಂಘದ ನಿರ್ದೇಶಕ ಗೋವಿಂದ ಭಟ್ ಉಪಸ್ಥಿತರಿದ್ದರು. ಪಡ್ರೆ ಕ್ಷೀರೋತ್ಪಾದಕ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ ಸ್ವಾಗತಿಸಿ, ಎಂ.ಎA.ಪಿ.ಒ.ಷಲ್ನ ಅರಯಾಕಂಡಿ ವಂದಿಸಿದರು. ಸುಧೀರ್ ರೈ ನಿರೂಪಿಸಿದರು.