ವಾಮಪಕ್ಷಗಳ ಬೆಂಬಲದೊಂದಿಗೆ ಇಂಡಿಯ ಒಕ್ಕೂಟ ಕೇಂದ್ರದಲ್ಲಿ ಅಧಿಕಾರಕ್ಕೇರಲಿದೆ-ಚೆನ್ನಿತ್ತಲ
ಕಾಸರಗೋಡು: ವಾಮಪಕ್ಷಗಳ ಬೆಂಬಲದೊಂದಿಗೆ ಇಂಡಿಯ ಒಕ್ಕೂಟ ಈ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೇರಲಿ ದೆಯೆಂದು ಮಾಜಿ ವಿಪಕ್ಷ ನಾಯಕ, ಕಾಂಗ್ರೆಸ್‌ನ ಹಿರಿಯ ನೇತಾರ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ಕಾಸರಗೋಡು ಪ್ರೆಸ್‌ಕ್ಲಬ್‌ನಲ್ಲಿ ನಿನ್ನೆ ನಡೆದ ಜನಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಈಹಿಂದೆ ಇದ್ದ ರೀತಿಯ ಮೋದಿ ಅಲೆ ಭಾರತದಲ್ಲಿ ಇಂದಿಲ್ಲ. ಪ್ರಜಾತಂತ್ರ ಮತ್ತು ಧರ್ಮನಿರಪೇಕ್ಷತೆಯನ್ನು ಸಂರಕ್ಷಿಸಿ ಸುವುದರ ಜೊತೆಗೆ ಕೋಮುವಾದವನ್ನು ಹಿಮ್ಮೆಟ್ಟಿಸಬೇಕಾ ಗಿರುವುದು ಅತೀ ಅಗತ್ಯವಾಗಿದೆ. ಈ ಉದ್ದೇಶದಿಂದಲೇ ಇಂಡಿಯಾ ಎಂಬ ಹೆಸರಲ್ಲಿ ವಿಪಕ್ಷಗಳ ಒಕ್ಕೂಟ ರಚಿಸಲಾಗಿದೆ. ಮೋದಿ ಇನ್ನಷ್ಟು ಅಧಿಕಾರಕ್ಕೇರಿದಲ್ಲಿ ದೇಶದಲ್ಲಿ ಮುಂದೆ ಚುನಾವಣೆಯೇ ಇಲ್ಲದಾಗಲಿದೆ. ಇದನ್ನು ತಡೆಗಟ್ಟಲು ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೇರಬೇಕಾಗಿರುವುದು ಅತೀ ಅನಿವಾರ್ಯವಾಗಿದೆ. ಕೇರಳದಲ್ಲಿ ಬಿಜೆಪಿ ಮತ್ತು ಮೋದಿ ಬಗ್ಗೆ ಮೌನ ಪಾಲಿಸುತ್ತಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಹುಲ್ ಗಾಂಧಿಯನ್ನು ಮಾತ್ರವೇ ಟೀಕಿಸುತ್ತಿದ್ದಾರೆ. ಎಡರಂಗ ಸರಕಾರ ಮಾಡಿದ ಸಾಧನೆಗಳಾದರೂ ಏನು ಎಂಬುವುದನ್ನು ಹೇಳಲು ಸಾಧ್ಯವಾಗದ ಸ್ಥಿತಿ ಮುಖ್ಯಮಂತ್ರಿಗೆ ಉಂಟಾಗಿದೆ. ಕೇರಳದಲ್ಲಿ ಎಡರಂಗದ ವಿರುದ್ಧ ಜನಾಕ್ರೋಶ ಎದ್ದು ಬಂದಿದೆ. ಬಿಜೆಪಿ ಮತ್ತು ಸಿಪಿಎಂ ಪರಸ್ಪರ ಒಳ ಒಪ್ಪಂದ ಮಾಡಿಕೊಂಡಿದೆಯೆಂದು ಚೆನ್ನಿತ್ತಲ ಆರೋಪಿಸಿದರು.