ವಾರಂಟ್ ಆರೋಪಿ ಗಾಂಜಾ ಸಹಿತ ಸೆರೆ
ಉಪ್ಪಳ: ಕರ್ನಾಟಕದಲ್ಲಿ ವಾರಂಟ್ ಆರೋಪಿಯದ ಓರ್ವ ಗಾಂಜಾ ಸಹಿತ ಮಂಜೇಶ್ವರದಲ್ಲಿ ಸೆರೆಗೀಡಾಗಿದ್ದಾನೆ. ದ.ಕ. ಜಿಲ್ಲೆಯ ಮಂಜನಾಡಿ ಬಟ್ಯಡ್ಕ ನಿವಾಸಿ ಮೊಹಮ್ಮದ್ ಅಬ್ದುಲ್ ಫಯಾಸ್ (26) ಬಂಧಿತ ಆರೋಪಿಯಾಗಿ ದ್ದಾನೆ. ಮೊನ್ನೆ ರಾತ್ರಿ 9.30ರ ವೇಳೆ ಐಲ ಗೇಟ್ ಬಳಿ ಸಮುದ್ರ ತೀರದಲ್ಲಿ ಕಾರು ಸಹಿತ ತಲುಪಿದ ಅಬ್ದುಲ್ ಫಯಾಸ್ ಅಲ್ಲಿ ನಿಂತಿದ್ದನೆನ್ನಲಾಗಿದೆ. ಈತನ ಮೇಲೆ ಸಂಶಯಗೊಂಡ ನಾಗರಿಕರು ಈತನನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ತಲುಪಿ ತಪಾಸಣೆ ನಡೆಸಿದಾಗ ಆರೋಪಿಯ ಕೈಯಿಂದ 9.5 ಗ್ರಾಂ ಗಾಂಜಾ ಪತ್ತೆಹಚ್ಚಲಾಗಿದೆ. ಈತನ ಕಾರನ್ನು ಪೊಲೀಸರು ವಶಕ್ಕೆ ತೆಗೆದಿದ್ದಾರೆ. ಆರೋಪಿಯು ಕೊಣಾಜೆ ಠಾಣೆಯಲ್ಲಿ ದಾಖಲಾದ ಹಲವು ಪ್ರಕರಣಗಳ ಆರೋಪಿಯಾಗಿದ್ದಾ ನೆಂದು ಪೊಲೀಸರು ತಿಳಿಸಿದ್ದಾರೆ.