ವಾಹನ ಮಾರಾಟದ ಆರ್ಥಿಕ ವ್ಯವಹಾರದ ಹೆಸರಲ್ಲಿ ಯುವಕನನ್ನು ಅಪಹರಿಸಿದ ಪ್ರಕರಣ: ಐದು ಮಂದಿ ಸೆರೆ
ಕಾಸರಗೋಡು: ವಾಹನ ಮಾರಾಟ ವ್ಯವಹಾರಕ್ಕೆ ಸಂಬಂಧಿಸಿದ ಆರ್ಥಿಕ ವ್ಯವಹಾರದ ಹೆಸರಲ್ಲಿ ಯುವಕನನ್ನು ಅಪಹರಿಸಿ ಹಲ್ಲೆ ನಡೆಸಿದ ಪ್ರಕರಣದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಪಾಣತ್ತೂರು ನಿವಾಸಿಗಳಾದ ಎಸ್.ಕೆ. ರಿಯಾಸ್ (33), ಉನೈಸ್ ಅನ್ಸಾರಿ (25), ಎಸ್.ಕೆ. ಮುಹಮ್ಮದ್ ಅಮರ್ (20), ಎಸ್.ಕೆ. ಶಮ್ಮಾಸ್ (20) ಮತ್ತು ಕೆ. ಜೋಬಿಷ್ (30) ಬಂಧಿತರಾದ ಆರೋಪಿಗಳು.
ಕಳೆದ ಮಂಗಳವಾರ ಕಾರಿನಲ್ಲಿ ಚಿಕ್ಕರಕ್ಕಲ್‌ಗೆ ಸಮೀಪದ ಚೆಕ್ಕಿಕುಳಂ ಕುಂಡಿಲಾಕಂಡಿ ನಿವಾಸಿ ಸುರೂರ್ (47) ಎಂಬವರನ್ನು ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಅಲ್ಲೇ ಪಕ್ಕದ ಮುಂಡೇರಿ ಕೈಪಕ್ಕ ಮೊಟ್ಟ ಎಂಬಲ್ಲಿ ಕಾರಿನಲ್ಲಿ ಬಂದ ಆರೋಪಿಗಳು ಸುರೂರ್‌ರ ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆಸಿ ಬೀಳಿಸಿದ ಬಳಿಕ ಅವರನ್ನು ಕಾರಿಗೇರಿಸಿ ಅಪಹರಿಸಿ ಬೆದರಿಸಿ ಹಲ್ಲೆ ನಡೆಸಿ ನಂತರ ಪಾಣತ್ತೂರು ಬಳಿ ಉಪೇಕ್ಷಿಸಿ ಪರಾರಿಯಾದ ದೂರಿನಂತೆ ಚಕ್ಕರಕ್ಕಲ್ ಪೊಲೀಸ್ ಐಸ್.ಐ. ಎಂ.ಸಿ. ಪವನನ್‌ರ ನೇತೃತ್ವದ ಪೊಲೀಸರು ಈ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಪಹರಣಕ್ಕಾಗಿ ಬಳಸಲಾದ ಕಾರನ್ನೂ ಪೊಲೀಸರು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ.
ವಾಹನ ಮಾರಾಟದ ಆರ್ಥಿಕ ವ್ಯವಹಾರದ ಹೆಸರಲ್ಲಿ ಆರೋಪಿಗಳು ತನ್ನನ್ನು ಅಪಹರಿಸಿ, ಇರಿದು, ಹೆಲ್ಮೆಟ್‌ನಿಂದ ಮತ್ತು ಕೈಯಿಂದ ಹೊಡೆದು ಗಾಯಗೊಳಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಸುರೂರ್ ಆರೋಪಿಸಿದ್ದಾರೆ.