ವಿಘ್ನೇಶ್ವರ ಭಜನಾ ಮಂದಿರದಲ್ಲಿ ಛಾಯಾಫಲಕ ಪ್ರತಿಷ್ಠೆ, ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
ಮಂಗಲ್ಪಾಡಿ: ಪಂಜತ್ತೊಟ್ಟಿ ಶ್ರೀ ವಿಘ್ನೇಶ್ವರ ಭಜನಾ ಮಂದಿರದಲ್ಲಿ ದೇವರ ಛಾಯಾಫಲಕ ಪ್ರತಿಷ್ಠೆ ಮತ್ತು ಸಾನ್ನಿಧ್ಯ ಕಲಶೋತ್ಸವ ಇಂದು ಬೆಳಿಗ್ಗೆ ಆರಂಭಗೊಂಡಿತು. ಇದರಂಗವಾಗಿ ನಿನ್ನೆ ಸಂಜೆ ಅಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ವಿವಿಧ ತಂಡಗಳಿಂದ ಕುಣಿತ ಭಜನೆ, ಸಿಂಗಾರಿಮೇಳ ಶೋಭಯಾತ್ರೆಯಲ್ಲಿ ಏರ್ಪಡಿಸಲಾಗಿತ್ತು. ನೂರಾರು ಮಂದಿ ಭಾಗವಹಿಸಿದರು.