ಅಹಮ್ಮದಾಬಾದ್: ಭಾರತದ ಚುನಾವಣೆ ಮೇಲೆ ಕೆಲವು ವಿದೇಶಿ ಶಕ್ತಿಗಳು ಪ್ರಭಾವ ಬೀರಲೆತ್ನಿಸು ತ್ತಿವೆಯೆಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ. ಅಹಮ್ಮದಾಬಾದ್‌ನಲ್ಲಿ ಇಂದು ಬೆಳಿಗ್ಗೆ ಮತ ಚಲಾಯಿಸಿದ ನಂತರ ಸುದ್ದಿಗಾರ ರೊಂದಿಗೆ ಪ್ರಧಾನಿ ಮಾತನಾಡುತ್ತಿದ್ದರು.
ಭಾರತ ಇಂದು ವಿಶ್ವದಲ್ಲೇ ಅತೀ ದೊಡ್ಡ ಆರ್ಥಿಕ ಹಾಗೂ ಅಭಿವೃದ್ಧಿ ಯುತ ದೇಶವಾಗಿ ಬೆಳೆದುಬರ ತೊಡಗಿದೆ. ಆದರೆ ಅದನ್ನು ತಡೆಗಟ್ಟಲು ಕೆಲವು ವಿದೇಶಿ ಶಕ್ತಿಗಳು ಯತ್ನಿಸುತ್ತಿದ್ದಾರೆ. ಅಂತಹ ಯಾವುದೇ ಯತ್ನಗಳನ್ನು ಸಮಸ್ತ ಭಾರತೀಯರು ಸಂಘಟಿತರಾಗಿ ಹಿಮ್ಮೆಟ್ಟಿಸಿ ಪರಾಜಯಗೊಳಿಸಬೇಕು ಎಂದೂ ಪ್ರಧಾನಿ ಕರೆನೀಡಿದರು.
ದೇಶದ ಮುಸ್ಲಿಮರನ್ನು ಒಂದು ಓಟ್ ಬ್ಯಾಂಕ್ ಆಗಿ ಮಾತ್ರವೇ ಕೆಲವರು ಕಾಣುತ್ತಿದ್ದಾರೆ. ಇಂತಹ ಯತ್ನಗಳನ್ನು ಅರಿತುಕೊಳ್ಳಲು ಮುಸ್ಲಿಮರು ಮುಂದಾಗಬೇಕು. ಗಲ್ಫ್ ರಾಷ್ಟ್ರಗಳಲ್ಲೂ ಮುಸ್ಲಿಮರು ಇಂದು ಬದಲಾಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ದೇಶದಲ್ಲಿ ಸರ್ವಾಧಿಕಾರಿ ಯತ್ನಗಳನ್ನು ನಡೆಸಿರುವುದು ಕಾಂಗ್ರೆಸೇ ಆಗಿದೆಯೆಂದು ಅವರು ಹೇಳಿದ್ದಾರೆ.