ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ: ನಾಲ್ವರ ವಿರುದ್ಧ ಕೇಸು
ಕಾಸರಗೋಡು: ಚಟ್ಟಂಚಾಲ್ ಎಂಐಸಿ ಕಾಲೇಜಿನ ಮುಂಭಾಗದ ರಸ್ತೆಯಲ್ಲಿ ನಿನ್ನೆ ಸಂಜೆ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡಿದ್ದು ಇದಕ್ಕೆ ಸಂಬಂಧಿಸಿ ಮೇಲ್ಪರಂಬ ಪೊಲೀಸರು ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ನೆಲ್ಲಿಕಟ್ಟೆಯ ಸಫ್ವಾನ್ (19), ಪೈಕ ಮಣವಾಟಿ ನಗರದ ಪಿ.ಎಸ್. ಅಬ್ದುಲ್ ಜಂಷೀದ್ (19), ನೆಕ್ರಾಜೆಯ ಪಿ.ಎ. ಮೊಹಮ್ಮದ್ ನೌರಿನ್ (20) ಮತ್ತು ಬೆಳ್ಳೂರು ನಾಟೆಕಲ್ಲಿನ ತನ್‌ಶೀಫ್ ರಹ್ಮಾನ್ (18) ಎಂಬವರು ಪೊಲೀಸ್ ಕಸ್ಟಡಿಗೊಳಗಾದವರು. ಇವರ ವಿರುದ್ಧ ಪೊಲೀಸರು ಸ್ವಯಂ ಆಗಿ ಪ್ರಕರಣ ದಾಖಲಿಸಿದ ಬಳಿಕ ಜಾ ಮೀನಿನಲ್ಲಿ ಬಿಡುಗಡೆಗೊಳಿಸಿ ದ್ದಾರೆ. ವಿದ್ಯಾರ್ಥಿಗಳು ಹೊಡೆದಾಟದಲ್ಲಿ ತೊಡಗಿದಾಗ ಪೊಲೀಸರು ಆಗಮಿಸಿ, ಅವರನ್ನು ಚದುರಿಸಿದ್ದಾರೆ. ಅದಾದ ಬಳಿಕವೂ ಮತ್ತೆ ಅವರು ಘರ್ಷಣೆಯಲ್ಲಿ ತೊಡಗಿದಾಗ ಆ ಪೈಕಿ ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.