ವಿದ್ಯಾರ್ಥಿಗೆ ಸಲಿಂಗರತಿ ಕಿರುಕುಳ: ಆರೋಪಿ ಸೆರೆ
ಕಾಸರಗೋಡು: ಮಾನಸಿಕ ಅಸ್ವಸ್ಥತೆಯುಳ್ಳ ವಿದ್ಯಾರ್ಥಿಯನ್ನು ಬೈಕ್‌ನಲ್ಲಿ ಕರೆದೊಯ್ದು ಸಲಿಂಗರತಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಲ್ಲಿ ಆರೋಪಿಯನ್ನು ಬಂಧಿಸಲಾ ಗಿದೆ. ಪೊವ್ವಲ್ ನಿವಾಸಿಯೂ ಈ ಹಿಂದೆ ಎರಡು ಪೋಕ್ಸೋ ಪ್ರಕರಣಗಳಲ್ಲಿ ಆರೋಪಿಯಾದ ಸಾದಿಕ್ (24) ಎಂಬಾತನನ್ನು ಆದೂರು ಠಾಣೆ ಎಸ್‌ಐ ವಿನೋದ್ ಹಾಗೂ ತಂಡ ಸೆರೆಹಿಡಿದಿದೆ. ವಿದ್ಯಾರ್ಥಿಗೆ ಮಾದಕ ವಸ್ತು ನೀಡಿ ಈತ ಕಿರುಕುಳ ನೀಡಿ ರುವುದಾಗಿ ಸಂಶಯಿಸಲಾಗಿದೆ. ಘಟನೆ ದಿನದಂದು ಈತ ಸಂಚರಿ ಸಿದ ಬೈಕ್‌ನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿ ದ್ದಾರೆ. ಚೆಂಗಳ ಪಂಚಾಯತ್ ವ್ಯಾಪ್ತಿಯ ಕ್ವಾರ್ಟರ್ಸ್‌ನಲ್ಲಿ ವಾಸಿ ಸುವ 20ರ ಹರೆಯದ ವಿದ್ಯಾರ್ಥಿಗೂ ಆರೋಪಿ ಸಾದಿಕ್ ಕಿರುಕುಳ ನೀಡಿರುವುದಾಗಿ ದೂರಲಾಗಿದೆ.