ವಿದ್ಯುತ್ ಕಂಬದಿಂದ ಹಾರಿದ ಕಿಡಿ: ಹುಲ್ಲು ಉರಿದು ನಾಶ; ತಪ್ಪಿದ ಅಪಾಯ
ಮುಳ್ಳೇರಿಯ: ವಿದ್ಯುತ್ ಕಂಬದಿಂದ ಹಾರಿದ ಕಿಡಿ ಹುಲ್ಲಿಗೆ ಬಿದ್ದು ಬೆಂಕಿ ಆಕಸ್ಮಿಕ ಉಂಟಾಗಿದೆ. ಕಾರಡ್ಕ ಸರಕಾರಿ ಹೈಸ್ಕೂಲ್ ಸಮೀಪ ನಿನ್ನೆ ರಾತ್ರಿ ಅಪಾಯ ಸಂಭವಿಸಬಹುದಾದ ಸಾಧ್ಯತೆ ತಪ್ಪಿಹೋಗಿದೆ. ಒಣಗಿದ್ದ ಹುಲ್ಲಿಗೆ ಬೆಂಕಿ ತಗಲಿ ಹರಡಿದ ಕಾರಣ ಮೀಟರ್‌ಗಳಷ್ಟು ದೂರದಲ್ಲಿ ಹುಲ್ಲು ಭಸ್ಮವಾಗಿದೆ. ಸಮೀಪದ ಅಕೇಶಿಯಾ ಮರಗಳಿಗೆ ಬೆಂಕಿ ತಗಲುವುದನ್ನು ಸ್ಥಳೀಯರ ನೇತೃತ್ವದಲ್ಲಿ ಹಾಗೂ ಅಗ್ನಿಶಾಮಕದಳದ ಸಹಾಯದಿಂದ ನಂದಿಸಲು ಯತ್ನಿಸಲಾಗಿತ್ತು. ಈ ವೇಳೆ ಮಳೆ ಸುರಿದಿದ್ದು, ಬೆಂಕಿ ಹರಡುವುದಕ್ಕೆ ಕಡಿವಾಣ ಬಿತ್ತು. ಈ ಹಿನ್ನೆಲೆಯಲ್ಲಿ ಸಂಭವಿಸಬಹುದಾಗಿದ್ದ ಅಪಾಯ ತಪ್ಪಿಹೋಗಿದೆ.