ವಿದ್ಯುತ್ ತಂತಿ ಮೇಲೆ ಮರ ಮುರಿದು ಬಿದ್ದು ರಸ್ತೆ ತಂಡ: ತಪ್ಪಿದ ಅಪಾಯ
ಮಂಜೇಶ್ವರ: ಮಳೆಗೆ ಮರವೊಂದು ರಸ್ತೆಗೆ ಮುರಿದು ಬಿದ್ದು ಸಂಚಾರಕ್ಕೆ ತಡೆ ಉಂಟಾದ ಘಟನೆ ನಡೆದಿದೆ. ಹೊಸಂಗಡಿ-ಆನೆಕಲ್ಲು ರಸ್ತೆಯ ಕಡಂಬಾರು ಎಂಬಲ್ಲಿ ನಿನ್ನೆ ರಾತ್ರಿ ಸುಮಾರು 10ಗಂಟೆ ವೇಳೆ ರಸ್ತೆ ಬದಿಯಲ್ಲಿದ್ದ ಬೃಹತ್ ಅಕೇಶೀಯ ಮರವೊಂದು ಮುರಿದು ವಿದ್ಯುತ್ ತಂತಿಗೆ ಬಿದ್ದು ತಂತಿ ತುಂಡಾಗಿ ಚೆಲ್ಲಾಪಿಲ್ಲಿಯಾಗಿದೆ. ಈ ವೇಳೆ ವಾಹನ ಸಂಚಾರ ಕಡಿಮೆ ಇದ್ದುದರಿಂದ ಅಪಾಯ ತಪ್ಪಿದೆ. ಕೂಡಲೇ ವಿದ್ಯುತ್ ಇಲಾಖೆ ತಲುಪಿ ವಿದ್ಯುತ್ ವಿಚ್ಛೇಧಿಸಿದೆ. ಉಪ್ಪಳ ಅಗ್ನಿ ಶಾಮಕ ದಳದ ಸ್ಟೇಷನ್ ಆಫೀಸರ್ ಸುನಿಲ್ ಕುಮಾರ್ ನೇತೃತ್ವದ ಸಿಬ್ಬಂದಿಗಳು ತಲುಪಿ ಮರವನ್ನು ಕಡಿದು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದ್ದಾರೆ.