ವಿದ್ಯುತ್ ದರ ಏರಿಕೆ ವಿರುದ್ಧ ಯೂತ್ ಲೀಗ್‌ನಿಂದ ದೊಂದಿ ಮೆರವಣಿಗೆ
ಮಂಜೇಶ್ವರ: ಅನಿಯಂತ್ರಿತ ವಿದ್ಯುತ್ ದರ ಹೆಚ್ಚಳದ ವಿರುದ್ಧ ಮುಸ್ಲಿಂ ಲೀಗ್ ಮತ್ತು ಯೂತ್ ಲೀಗ್ ನಡೆ ಸುವ ಪ್ರತಿಭಟನೆಯಂಗವಾಗಿ ಮಂ ಜೇಶ್ವರ ವಿದ್ಯುತ್ ಕಚೇರಿ ಎದುರು ಯೂತ್ ಲೀಗ್ ಮಂಜೇ ಶ್ವರ ಸಮಿತಿ ವತಿಯಿಂದ ದೊಂದಿ ಮೆರವಣಿಗೆ ನಡೆಸ ಲಾಯಿತು. ಪ್ರತಿಭಟನೆಯನ್ನು ಮುಸ್ಲಿಂ ಲೀಗ್ ಕ್ಷೇತ್ರ ಕೋಶಾಧಿಕಾರಿ ಯು.ಕೆ. ಸೈಫುಲ್ಲ ತಂಙಳ್ ಉದ್ಘಾಟಿಸಿದರು. ಹನೀಫ್ ಕುಚ್ಚಿಕ್ಕಾಡ್ ಅಧ್ಯಕ್ಷತೆ ವಹಿಸಿದರು. ಅಜೀಜ್ ಹಾಜಿ, ಕೆ.ಎಂ. ಖಾದರ್, ಸಿದ್ದಿಕ್ ಹಾಜಿ, ಮೊ ಯ್ದೀನ್ ಸಾಹಿಬ್, ಹನೀಫ್ ಬಿ.ಎಂ., ಬಶೀರ್ ಕನಿಲ, ಮುಕ್ತಾರ್, ಇರ್ಫಾನ್ ಕುಚ್ಚಿಕ್ಕಾಡ್, ರಿಯಾಜ್ ಉದ್ಯಾವರ ಮಾತನಾಡಿದರು. ಮುಸ್ತಫಾ ಉದ್ಯಾವರ ಸ್ವಾಗತಿಸಿ, ವಂದಿಸಿದರು.