ವಿದ್ಯುತ್ ದರ ಶೀಘ್ರ ಏರಿಕೆ ಸಾಧ್ಯತೆ
ತಿರುವನಂತಪುರ: ರಾಜ್ಯದಲ್ಲಿ ವಿದ್ಯುತ್ ದರ ಶೀಘ್ರ ಹೆಚ್ಚಳವಾಗಲಿದೆ ಎಂಬ ಸೂಚನೆಯಿದೆ. ಇಂದು ಅಥವಾ ನಾಳೆಯೇ ಈ ಬಗ್ಗೆ ಘೋಷಣೆಯಾಗಲಿ ದೆಯೆಂದೂ ಹೇಳಲಾಗುತ್ತಿದೆ. ರಾಜ್ಯ ವಿದ್ಯುತ್ ರೆಗ್ಯುಲೇಟರಿ ಕಮಿಶನ್ ಇಂದೇ ದರ ಹೆಚ್ಚಿಸುವ ಬಗ್ಗೆ ಆಲೋ ಚಿಸಿತ್ತು. ಆದರೆ ಕೇರಳ ರಾಜ್ಯೋತ್ಸವ ದಿನದಂದೇ ದರ ಹೆಚ್ಚಿಸಲಿರುವ ನಿರ್ಧಾರವನ್ನು ಮುಖ್ಯಮಂತ್ರಿಯ ನಿರ್ದೇಶದ ಹಿನ್ನೆಲೆಯಲ್ಲಿ ಹಿಂತೆಗೆದು ಕೊಂಡಿ ರುವುದಾಗಿ ಹೇಳಲಾಗುತ್ತಿದೆ. ನೂತನ ದರ ನಿರ್ಣಯಕ್ಕೆ ಅಂತಿಮ ಅಂಗೀಕಾರ ನೀಡಲು ನಿನ್ನೆ ರೆಗ್ಯುಲೇಟರಿ ಕಮಿಷನ್ ಸಭೆ ನಡೆದಿತ್ತು.