ವಿದ್ಯುತ್ ಭವನ ಮುಂಭಾಗ ಬಿಎಂಎಸ್ ಧರಣಿ
ಕಾಸರಗೋಡು: ಕೇರಳ ವಿದ್ಯುತ್ ಮಜ್ದೂರ್ ಸಂಘ ಬಿಎಂಎಸ್ ಆಶ್ರಯದಲ್ಲಿ ಕಾಸರಗೋಡು ವಿದ್ಯುತ್ ಭವನದ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಕೆಎಸ್‌ಇಬಿ ನೌಕರರಿಗೆ ಲಭಿಸಬೇಕಾದ ಡಿ.ಎ, ರಜೆ ವೇತನ, ಭಡ್ತಿ ಎಂಬಿವು ನೀಡದಿರುವುದನ್ನು ಪ್ರತಿಭಟಿಸಿ ಈ ತಿಂಗಳ ೬ರಂದು ವಿದ್ಯುತ್ ಸಚಿವರ ಔದ್ಯೋಗಿಕ ವಸತಿಗೆ ಪ್ರತಿಭಟನೆ ಮಾರ್ಚ್ ನಡೆಸುವುದರಂಗವಾಗಿ ವಿದ್ಯುತ್ ಭವನಗಳ ಮುಂಭಾಗ ನಡೆಸುವ ಪ್ರತಿಭಟನೆ ಕಾರ್ಯಕ್ರಮದಂಗವಾಗಿ ಕಾಸರಗೋಡು ವಿದ್ಯುತ್ ಭವನದ ಮುಂಭಾಗ ಪ್ರತಿಭಟನಾ ಧರಣಿ ನಡೆಸಲಾಯಿತು. ಕೆ.ಎಸ್.ಆರ್.ಟಿ.ಸಿಯ ಬಳಿಕ ಈಗ ಕೆ.ಎಸ್.ಇ.ಬಿ. ಕಾರ್ಮಿಕರನ್ನು ಸಂಕಷ್ಟಕ್ಕೆ ಸಿಲುಕಿಸಲು ರಾಜ್ಯ ಸರಕಾರ ಮುಂದಾಗುತ್ತಿದೆ ಎಂದು ಧರಣಿಯಲ್ಲಿ ದೂರಲಾಯಿತು.
ಬಿಎಂಎಸ್ ರಾಜ್ಯ ಸಮಿತಿ ಸದಸ್ಯ ವಿ.ವಿ. ಬಾಲಕೃಷ್ಣನ್ ಉದ್ಘಾಟಿಸಿದರು. ಕೆ.ವಿ.ಎಂ.ಎಸ್ ಜಿಲ್ಲಾ ವರ್ಕಿಂಗ್ ಪ್ರಸಿಡೆಂಟ್ ವಸಂತ ನಾಯ್ಕ್ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ಕೆ.ಎನ್. ಕೃಷ್ಣನ್ ಕುಟ್ಟಿ ಪ್ರಧಾನ ಭಾಷಣ ಮಾಡಿದರು. ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಜೆ. ಶುಭ ಕೋರಿದರು. ಕಾರ್ಯದರ್ಶಿ ಶಶಿಧರನ್ ಕೆ. ಸ್ವಾಗತಿಸಿ, ಜಿಲ್ಲಾ ಜೊತೆ ಕಾರ್ಯದರ್ಶಿ ಮುರಳಿ ಟಿ.ಪಿ. ವಂದಿಸಿದರು.