ವಿದ್ಯುತ್ ವಿಚ್ಛೇಧನದಿಂದ ಕೃಷಿಗೆ ನೀರಿಲ್ಲ: ಸಂಪರ್ಕ ಮರುಸ್ಥಾಪಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ
ಕುಂಬಳೆ: ಯಾವುದೇ ಮುನ್ಸೂಚನೆ ಯಿಲ್ಲದೆ ಅಧಿಕಾರಿಗಳು ವಿಚ್ಛೇಧಿಸಿದ ವಿದ್ಯುತ್ ಸಂಪರ್ಕವನ್ನು ಶೀಘ್ರಮರು ಸ್ಥಾಪಿಸಬೇಕೆಂದು ಆಗ್ರಹಿಸಿ ಹೇರೂರು ಮೀಪಿರಿ ಕಳಂ ಜಾಡಿ ಗದ್ದೆಬಯಲು, ಭತ್ತ ಉತ್ಪಾದಕ ಸಮಿತಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಹೇರೂರು ಹಾಗೂ ಸಮೀಪ ಪ್ರದೇಶಗಳಲ್ಲಿ ೫೦೦ರಷ್ಟು ಪರಂಪರಾ ಗತ ಕೃಷಿಕರಿಗೆ ಕೃಷಿ ಅಗತ್ಯಗಳಿಗೆ ನೀರು ಉಪಯೋಗಿಸಲು ಬಳಸುತ್ತಿದ್ದ ಪಂಪ್ಸೆಟ್ನ ವಿದ್ಯುತ್ ಸಂಪರ್ಕ ವನ್ನು ಅಧಿಕಾರಿಗಳು ನಿಷೇಧಿಸಿದ್ದಾರೆ. ಇದರಿಂದ ನೀರಾವರಿ ಹಾಗೂ ಕುಡಿಯುವ ನೀರಿಗಾಗಿ ಕೃಷಿಕರು ಹಾಗೂ ನಾಗರಿಕರು ಭಾರೀ ಸಮಸ್ಯೆ ಎದುರಿಸಬೇಕಾಗಿದೆ. ಪಂಪ್ ಸೆಟ್ನ ಮಾಲಕರಿಗೆ ಕೃಷಿ ಭವನ ವಿದ್ಯುತ್ ದರ ಪಾವತಿಸುತ್ತಿತ್ತು. ಆದರೆ ಅಧಿಕಾರಿಗಳ ಈಗಿನ ಕ್ರಮದ ವಿರುದ್ಧ ಕೃಷಿಕರು ಕೆಎಸ್ಇಬಿಯನ್ನು ಸಂಪರ್ಕಿಸಿದರೂ ನಿರ್ಲಕ್ಷ್ಯ ರೀತಿಯ ಪ್ರತಿಕ್ರಿಯೆ ಅವರಿಂದ ಲಭಿಸಿದೆಯೆಂ ದು ಜಿಲ್ಲಾಧಿಕಾರಿಗೆ ನೀಡಿದ ಮನವಿ ಯಲ್ಲಿ ದೂರಲಾಗಿದೆ. ಸಮಿತಿಯ ಅಧ್ಯಕ್ಷ ಎಂ. ಅಬ್ದುಲ್ ರಹಿಮಾನ್, ಕನ್ವೀನರ್ ಮುರಳೀಧರ ಮಯ್ಯ ಎಂಬಿವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.