ವಿಧಾನಸಭಾ ಮಂಡಲಗಳಲ್ಲಿ ಮಹಿಳೆಯರಿಂದ ನಿಯಂತ್ರಿಸುವ ಐದು ಮತಗಟ್ಟೆಗಳು
ಕಾಸರಗೋಡು: ಜಿಲ್ಲೆಯ 5 ವಿಧಾನಸಭಾ ಮಂಡಲಗಳಲ್ಲಿ ಮಹಿಳೆಯರು ನಿಯಂತ್ರಿಸುವ ತಲಾ ಒಂದು ಬೂತುಗಳನ್ನು ಸಿದ್ಧಪಡಿಸಲಾಗಿದೆ. ಮಂಜೇಶ್ವರ ಮಂಡಲದಲ್ಲಿ 150ನೇ ಬೂತ್ ಹೋಲಿ ಫ್ಯಾಮಿಲಿ ಎಯ್ಡೆಡ್ ಸೀನಿಯರ್ ಬೇಸಿಕ್ ಸ್ಕೂಲ್ ಕುಂಬಳೆ, ಕಾಸರಗೋಡು 138ನೇ ಬೂತ್ ಸರಕಾರಿ ಕಾಲೇಜ್, ಉದುಮದಲ್ಲಿ 148ನೇ ಬೂತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಕುಂಡAಕುಳಿ, ಕಾಞಂಗಾಡ್ ಮಂಡಲದಲ್ಲಿ 20ನೇ ನಂಬ್ರ ಮತಗಟ್ಟೆ ಮಹಾಕವಿ ಪಿ ಸ್ಮಾರಕ ಸರಕಾರಿ ಶಾಲೆ ವೆಳ್ಳಿಕೋತ್, ತೃಕರಿಪುರದಲ್ಲಿ ಮತಗಟ್ಟೆ ನಂಬ್ರ 45 ಚಿಮೇನಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಎಂಬಿವು ಮಹಿಳೆಯರು ನಿಯಂತ್ರಿಸುವ ಮತಗಟ್ಟೆಗಳಾಗಿವೆ.
ಐದು ವಿಧಾನಸಭಾ ಕ್ಷೇತ್ರಗಳಲ್ಲೂ ಮಾದರಿ ಪೋಲಿಂಗ್ ಸ್ಟೇಶನ್ಗಳನ್ನು ಸಿದ್ಧಪಡಿಸಲಾಗಿದೆ. ಮಂಜೇಶ್ವರದಲ್ಲಿ 23ನೇ ನಂಬ್ರದ ಎಸ್.ಎ.ಟಿ.ಎಚ್.ಎಸ್ ಮಂಜೇಶ್ವರ, ಕಾಸರಗೋಡು ವಿಧಾನಸಭಾ ಕ್ಷೇತ್ರದ 13ನೇ ನಂಬ್ರ ಮತಗಟ್ಟೆಯಾದ ಕೇಂದ್ರೀಯ ವಿದ್ಯಾಲಯ ನಂ. 1, ಉದುಮ ಮಂಡಲದಲ್ಲಿ 87ನೇ ಮತಗಟ್ಟೆಯಾದ ಬಾರಾ ಜಿಡಬ್ಲ್ಯುಎಲ್ಪಿಎಸ್, ಕಾಞಂಗಾಡ್ ಕ್ಷೇತ್ರದಲ್ಲಿ ಮತಗಟ್ಟೆ ನಂಬ್ರ 166 ಸರಕಾರಿ ಎಲ್ಪಿ ಶಾಲೆ ಪಡನ್ನಕ್ಕಾಡ್, ತೃಕರಿಪುರದಲ್ಲಿ ಮತಗಟ್ಟೆ ನಂಬ್ರ 123 ಜಿಡಬ್ಲ್ಯುಯುಪಿಎಸ್ ಕೊಡಕ್ಕಾಡ್ ಎಂಬಿವು ಜಿಲ್ಲೆಯ ಮಾದರಿ ಮತಗಟ್ಟೆಗಳಾಗಿವೆ.
ಭಿನ್ನ ಸಾಮರ್ಥ್ಯದವರ ಸೌಹಾರ್ದ ಕ್ಕಾಗಿ ಎರಡು ಮತಗಟ್ಟೆಗಳನ್ನು ಜಿಲ್ಲೆಯಲ್ಲಿ ಸಿದ್ಧಪಡಿಸಲಾಗಿದೆ. ಕಾಸರಗೋಡು ಕ್ಷೇತ್ರದಲ್ಲಿ 115ನೇ ನಂಬ್ರದ ಮತಗಟ್ಟೆಯಾದ ಚೆರ್ಕಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಕಾಞಂಗಾಡ್ ಮಂಡಲದಲ್ಲಿ 135ನೇ ನಂಬ್ರ ಮತಗಟ್ಟೆಯಾದ ದುರ್ಗಾ ಹೈಯರ್ ಸೆಕೆಂಡರಿ ಶಾಲೆ ಎಂಬಿವು ಭಿನ್ನ ಸಾಮರ್ಥ್ಯದವರಿಗಾಗಿ ಸೌಹಾರ್ದ ಮತಗಟ್ಟೆಗಳಾಗಿವೆ. ಯುವಕರಿಂದ ನಿಯಂತ್ರಿಸಲ್ಪಡುವ ಒಂದು ಮತಗಟ್ಟೆ ಜಿಲ್ಲೆಯಲ್ಲಿದ್ದು, ಮಂಜೇಶ್ವರ ಮಂಡಲದ 165ನೇ ನಂಬ್ರ ಸರಕಾರಿ ವಿಎಚ್ಎಸ್ಎಸ್ ಮೊಗ್ರಾಲ್ ಆಗಿದೆ ಆ ಮತಗಟ್ಟೆ.