ವಿವಿಧೆಡೆಗಳಿಂದ ವಿದೇಶ ಮದ್ಯ ಪತ್ತೆ
ಕಾಸರಗೋಡು: ಮುಟ್ಟತ್ತೋಡಿ ಗ್ರಾಮದ ಕಲ್ಲಕಟ್ಟೆಯಲ್ಲಿ ಕಾಸರಗೋಡು ಅಬಕಾರಿ ರೇಂಜ್ ಇನ್ಸ್ಪೆಕ್ಟರ್ ಶಿಜು ಇ.ಡಿ.ಯವರ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 21 ಲೀಟರ್ ಗೋವಾ ಮತ್ತು ೨೦ ಲೀಟರ್ ಕರ್ನಾಟಕ ಮದ್ಯವನ್ನು ಪತ್ತೆಹಚ್ಚಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಈ ಮಾಲನ್ನು ಅಲ್ಲಿ ತಂದಿರಿಸಿದ ವ್ಯಕ್ತಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಅವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್) ಜೋಸೆಫ್ ಜೆ, ಪ್ರಿವೆಂಟಿವ್ ಆಫೀಸರ್ ಉಣ್ಣಿಕೃಷ್ಣನ್ ಕೆ, ಚಾಲಕ ಸುಮೋದ್ ಕುಮಾರ್ ಎಂ.ವಿ, ಸಿಇಒಗಳಾದ ರಾಜೇಶ್ ಪಿ, ಅಬ್ದುಲ್ ಅಸೀಸ್ ಮತ್ತು ನಿದೀಶ್ ಎಂಬವರು ಒಳಗೊಂಡಿದ್ದರು.
ಮುಳ್ಳೇರಿಯ: ಆದೂರು ಅಬಕಾರಿ ತಪಾಸಣಾ ಕೇಂದ್ರದಲ್ಲಿ ಅಬಕಾರಿ ತಂಡ ಆ ದಾರಿಯಾಗಿ ಬರುತ್ತಿದ್ದ ಕರ್ನಾಟಕ ಕೆಎಸ್ಆರ್ಟಿಸಿ ಬಸ್ಸನ್ನು ತಪಾಸಣಎಗೊಳಪಡಿಸಿದಾಗ ಅದರೊಳಗೆ 6.63 ಲೀಟರ್ ಕರ್ನಾಟಕ ಮದ್ಯ ಪತ್ತೆಯಾಗಿದೆ. ಅದನ್ನು ವಶಪಡಿಸಿದ ಅಬಕಾರಿ ತಂಡ ಆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದೆ. ಪ್ರಿವೆಂಟಿವ್ ಆಫೀಸರ್ ಮುಹಮ್ಮದ್ ಕಬೀರ್ ಬಿ.ಎಸ್. ನೇತೃತ್ವದಲ್ಲಿ ಪ್ರಭಾಕರನ್, ಸಿಇಒಗಳಾದ ಲಿಜು ಜಿ.ಎಸ್ ಎಂಬವರು ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು.