ವಿವಿಧೆಡೆಗಳಿಗೆ ಅಬಕಾರಿ ದಾಳಿ: ಭಾರೀ ಪ್ರಮಾಣದ ಮದ್ಯ ವಶ; ಕಾರು, ಸ್ಕೂಟರ್ ಕಸ್ಟಡಿಗೆ, ಓರ್ವ ಸೆರೆ
ಕಾಸರಗೋಡು: ಕಾಸರಗೋಡಿನ ವಿವಿಧೆಡೆಗಳಲ್ಲಿ ಅಬಕಾರಿ ತಂಡ ದಾಳಿ ನಡೆಸಿ ಭಾರೀ ಪ್ರಮಾಣದ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಈರ್ವರನ್ನು ಬಂಧಿಸ ಲಾಗಿದ್ದು, ಕಾರು ಮತ್ತು ಸ್ಕೂಟರ್‌ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕೂಡ್ಲು ರಾಮದಾಸನಗರ ಶಿವಮಂಗಲದಲ್ಲಿ ಕಾಸರಗೋಡು ಅಬಕಾರಿ ರೇಂಜ್‌ನ ಪ್ರಿವೆಂಟೀವ್ ಆಫೀಸರ್ ಸಿ.ಕೆ.ವಿ. ಸುರೇಶ್ ನೇತೃತ್ವದ ತಂಡ ದಾಳಿ ನಡೆಸಿ ಅಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ೨೫.೯೪ ಲೀಟರ್ ಕರ್ನಾಟಕ ನಿರ್ಮಿತ ವಿದೇಶಿ ಮದ್ಯ ಪತ್ತೆಹಚ್ಚಿ ವಶಪಡಿಸಲಾಗಿದೆ. ಆದರೆ ಈ ಸಂಬಂಧ ಯಾರನ್ನೂ ಬಂಧಿಸಲಾಗಿಲ್ಲ.
ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನಾರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಪ್ರಿವೆಂಟೀವ್ ಆಫೀಸರ್ ಜೇಮ್ಸ್ ಅಬ್ರಹಾಂ ಕುರಿಯರ ನೇತೃತ್ವದಲ್ಲಿ ವೆಳ್ಳರಿಕುಂಡ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ೨೫ ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಂಡಿದೆ. ಈ ಮಾಲನ್ನು ಸಾಗಿಸುತ್ತಿದ್ದ ಸ್ವಿಫ್ಟ್ ಕಾರನ್ನು ಅಬಕಾರಿ ತಂಡ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ವೆಳ್ಳರಿಕುಂಡ್ ಪಾಲಾವಯಲ್ ಪೆರುಮಾಟಿ ಕುನ್ನೇಲ್ ಹೌಸ್‌ನ ರೆಜಿ ಸೆಬಾಸ್ಟಿನ್ ಮತ್ತು ಪಾಲಾವಯಲ್ ನಿರತ್ತುಂತಟ್ಟ್‌ನ ವಿಜಯನ್ ವಿ (೪೧) ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ ವಿಜಯನ್‌ನನ್ನು ಅಬಕಾರಿ ತಂಡ ಬಂಧಿಸಿದೆ. ಬದಿಯಡ್ಕ ರೇಂಜ್‌ನ ಎಕ್ಸೈಸ್ ಇನ್‌ಸ್ಪೆಕ್ಟರ್ ವಿನು ಎಚ್‌ರ ನೇತೃತ್ವದ ಅಬಕಾರಿ ತಂಡ ಉಬ್ರಂಗಳ ಕೊರೆಕ್ಕಾನದಲ್ಲಿ ನಡೆಸಿದ ದಾಳಿಯಲ್ಲಿ ೨.೫ ಲೀಟರ್ ಅಕ್ರಮ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಸತೀಶ (೪೨) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಮಂಜೇಶ್ವರ ತಾಲೂಕಿನ ಕಯ್ಯಾರು ಗ್ರಾಮದ ಪೆರ್ಮುದೆಯಲ್ಲಿ ಕುಂಬಳೆ ಅಬಕಾರಿ ರೇಂಜ್‌ನ ಪ್ರಿವೆಂಟೀವ್ ಆಫೀಸರ್ ಮನಾಸ್ ಕೆ.ವಿ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ೪.೮೬ ಲೀಟರ್ ಕರ್ನಾಟಕ ಮದ್ಯ (೧೮೦ ಎಂ.ಎಲ್‌ನ ೨೭ ಪ್ಯಾಕೆಟ್) ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಸಂದೇಶ್ ಪಿ ಎಂಬಾತನ ವಿರುದ್ಧ ಪ್ರಕರಣ ದಾಖಲಿ ಸಲಾಗಿದೆ. ಆತ ಪರಾರಿಯಾದ ಕಾರ ಣದಿಂದ ಆತನನ್ನು ಬಂಧಿಸಲು ಸಾಧ್ಯ ವಾಗಿಲ್ಲವೆಂದು ಅಬಕಾರಿ ತಂಡ ತಿಳಿಸಿದೆ.
ಕಳನಾಡು ಕೀ ಯೂರಿನಲ್ಲಿ ನಿಗದಿತ ಪ್ರಮಾಣ ಕ್ಕಿಂತ ಹೆಚ್ಚು ಮದ್ಯ ಕೈವಶವಿರಿಸಿಕೊಂಡ ಆರೋಪದಂತೆ ಕಾಸರಗೋಡು ಅಬಕಾರಿ ರೇಂಜ್‌ನ ಪ್ರಿವೆಂಟೀವ್ ಆಫೀಸರ್ ರಂಜಿತ್ ಕೆ ವಿ ನೇತೃತ್ವದ ತಂಡ ಓರ್ವನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಕಳನಾಡಿನ ಬಿಜೇಶ್ ಡಿ ಎಂಬಾತನ ವಿರುದ್ಧ ಈ ಪ್ರಕರಣ ದಾಖಲಿಸ ಲಾಗಿದೆ. ಆತನಿಂದ ೪ ಲೀಟರ್ ಮದ್ಯ ವಶಪಡಿಸಲಾಗಿದೆಯೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮಾಲು ಸಾಗಿಸಲು ಬಳಸಲಾಗಿದ್ದ ಸ್ಕೂಟರ್‌ನ್ನು ಅಬಕಾರಿ ತಂಡ ವಶಪಡಿಸಿಕೊಂಡಿದೆ.