ವಿವಿಧ ಕಡೆಗಳಲ್ಲಿ ಅಧ್ಯಾಪಕ ಹುದ್ದೆ ಸಂದರ್ಶನ
ಕಡಂಬಾರು: ಇಲ್ಲಿನ ಜಿಎಚ್ಎಸ್ ಶಾಲೆಯಲ್ಲಿ ಖಾಲಿಯಿರುವ ಎಚ್ಎಸ್ಟಿ ಮಲಯಾಳ, ಫಿಸಿಕಲ್ ಸಯನ್ಸ್, ಗಣಿತ, ಹಿಂದಿ, ಪಾರ್ಟ್ ಟೈಮ್ ಅರಬಿಕ್, ಯುಪಿಎಸ್ಟಿ ಕನ್ನಡ, ಮಲಯಾಳ, ಎಲ್ಪಿಎಸ್ಟಿ ಕನ್ನಡ, ಜ್ಯೂನಿಯರ್ ಲ್ಯಾಂಗೇಜ್ ಹಿಂದಿ ಹುದ್ದೆ ಭರ್ತಿಗೆ ನಾಳೆ ಬೆಳಿಗ್ಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಮಂಗಲ್ಪಾಡಿ: ಇಲ್ಲಿನ ಸರಕಾರಿ ಪ್ರೌಢ ಶಾಲೆಯಲ್ಲಿ ಪ್ರೌಢ ಶಾಲಾ ವಿಭಾಗದ ಗಣಿತ (ಮಲಯಾಳ), ಹಿಂದಿ, ಇಂಗ್ಲೀಷ್, ಫಿಸಿಕಲ್ ಸಯನ್ಸ್, ಬಯೋಲಜಿ (ಕನ್ನಡ), ಯುಪಿ ವಿಭಾಗದಲ್ಲಿ ಕನ್ನಡ ಹುದ್ದೆ ಭರ್ತಿಗೆ ಈ ತಿಂಗಳು 30ರಂದು ಬೆಳಿಗ್ಗೆ 10 ಗಂಟೆಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಕುಂಜತ್ತೂರು: ಕುಂಜತ್ತೂರು ಜಿವಿಎಚ್ಎಸ್ಎಸ್ನಲ್ಲಿ ಹೈಸ್ಕೂಲು ವಿಭಾಗದ ಎಚ್ಎಸ್ಟಿ ಹಿಂದಿ, ಗಣಿತ (ಕನ್ನಡ ಮಾಧ್ಯಮ), ಅರಬಿಕ್ (ಅರೆಕಾಲಿಕ), ಯುಪಿಎಸ್ಟಿ (ಕನ್ನಡ, ಮಲಯಾಳ), ಹುದ್ದೆ ಭರ್ತಿಗೆ ಈ ತಿಂಗಳು 30ರಂದು 10 ಗಂಟೆಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಕಾಸರಗೋಡು: ಇಲ್ಲಿನ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಎಚ್ಎಸ್ಎಸ್ಟಿ ಪಾಲಿಟಿಕಲ್ ಸಯನ್ಸ್, ಅರಬಿಕ್, ಹಿಂದಿ ಹುದ್ದೆ ಭರ್ತಿಗೆ ಜೂನ್ 1ರಂದು ಬೆಳಿಗ್ಗೆ 10 ಗಂಟೆಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಪೆರ್ಲ: ಪಡ್ರೆ ವಾಣೀನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹೈಸ್ಕೂಲು ವಿಭಾಗದಲ್ಲಿ ಗಣಿತ (ಕನ್ನಡ), ಹಿಂದಿ ಅಧ್ಯಾಪಕ ಹುದ್ದೆ ಭರ್ತಿಗೆ ಜೂನ್ 1ರಂದು ಬೆಳಿಗ್ಗೆ 10 ಗಂಟೆಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಮೊಗ್ರಾಲ್: ಇಲ್ಲಿನ ಜಿವಿಎಚ್ಎಸ್ಎಸ್ನಲ್ಲಿ ಹೈಯರ್ ಸೆಕೆಂಡರಿ ವಿಭಾಗ ಹಿಸ್ಟರಿ, ಸೋಷ್ಯೋಲಜಿ, ಪಾಲಿಟಿಕಲ್ ಸಯನ್ಸ್, ಕಾಮರ್ಸ್, ಎಕಾನಾಮಿಕ್ಸ್, ಇಂಗ್ಲೀಷ್ ವಿಷಯಗಳಲ್ಲಿ ಅಧ್ಯಾಪಕರ ಹುದ್ದೆ ಖಾಲಿಯಿದ್ದು, ಭರ್ತಿಗೆ ಈ ತಿಂಗಳು 30ರಂದು ಶಾಲಾ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಸಂದರ್ಶನ ನಡೆಯಲಿದೆ.
ಮುಳ್ಳೇರಿಯ: ಅದೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಎಲ್ಪಿಎಸ್ಟಿ ಕನ್ನಡ, ಯುಪಿಎಸ್ಟಿ ಮಲಯಾಳ, ಜ್ಯೂನಿಯರ್ ಹಿಂದಿ, ಎಚ್ಎಸ್ಟಿ ಹಿಂದಿ, ಎಚ್ಎಸ್ಟಿ ಗಣಿತ (ಕನ್ನಡ, ಮಲಯಾಳ), ಎಚ್ಎಸ್ಟಿ ಫಿಸಿಕಲ್ ಸಯನ್ಸ್ (ಮಲಯಾಳ), ಎಚ್ಎಸ್ಟಿ ಇಂಗ್ಲೀಷ್ ಹುದ್ದೆ ಭರ್ತಿಗೆ ಜೂನ್ 1ರಂದು ಬೆಳಿಗ್ಗೆ 11 ಗಂಟೆಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಪೈವಳಿಕೆ: ಜಿಎಚ್ಎಸ್ಎಸ್ ಪೈವಳಿಕೆಯಲ್ಲಿ ಖಾಲಿಯಿರುವ ಎಚ್ಎಸ್ಟಿ ಹಿಂದಿ, ಎಚ್ಎಸ್ಟಿ ಸಂಸ್ಕೃತ (ಅರೆಕಾಲಿಕ), ಯುಪಿಎಸ್ಟಿ ಕನ್ನಡ ಹುದ್ದೆ ಭರ್ತಿಗೆ ಈ ತಿಂಗಳು 30ರಂದು ಬೆಳಿಗ್ಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಮೀಯಪದವು: ಕುಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ ಎಲ್ಪಿಎಸ್ಎ ಕನ್ನಡ ಹುದ್ದೆ ಭರ್ತಿಗೆ ಸಂದರ್ಶನ ನಾಳೆ ಬೆಳಿಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ನಡೆಯಲಿದೆ. ಕೆ-ಟೆಟ್ ಅರ್ಹರು ತಮ್ಮ ಅಸಲಿ ಪ್ರಮಾಣ ಪತ್ರಗಳೊಂದಿಗೆ ಹಾಜರಾಗಬಹುದು. 04998-252007ರಿಂದ ಹೆಚ್ಚಿನ ಮಾಹಿತಿ ಲಭಿಸುವುದು.
ಬದಿಯಡ್ಕ: ಪೆರಡಾಲ ಜಿಎಚ್ಎಸ್ನಲ್ಲಿ ಜ್ಯೂನಿಯರ್ ಲ್ಯಾಂಗ್ವೇಜ್ ಟೀಚರ್ ಹಿಂದಿ, ಜ್ಯೂನಿಯರ್ ಲ್ಯಾಂಗ್ವೇಜ್ ಟೀಚರ್ ಅರೆಬಿಕ್, ಎಚ್ಎಸ್ಟಿ ಅರೆಬಿಕ್, ಎಚ್ಎಸ್ಟಿ ನೇಚುರಲ್ ಸಯನ್ಸ್ ಮಲಯಾಳ, ಎಚ್ಎಸ್ ಫಿಸಿಕಲ್ ಎಜುಕೇಶನ್ ಟೀಚರ್ (ಪಿಇಟಿ) ಮೊದಲಾದ ಹುದ್ದೆಗಳು ಖಾಲಿ ಇದ್ದು, ಭರ್ತಿಗೊಳಿಸಲು ಈ ತಿಂಗಳ 30ರಂದು ಬೆಳಿಗ್ಗೆ 10.30ಕ್ಕೆ ಸಂದರ್ಶನ ನಡೆಯಲಿದೆ. ಅರ್ಹರು ಅಸಲಿ ಪ್ರಮಾಣ ಪತ್ರಗಳೊಂದಿಗೆ ಹಾಜರಾಗಬಹುದೆಂದು ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.