ವಿವಿಧ ಕಡೆಗಳಲ್ಲಿ ನಿಲ್ಲಿಸಿದ ವಾಹನಗಳಿಂದ ವಸ್ತುಗಳನ್ನು ಕಳವುಗೈಯ್ಯುವ ತಂಡ ಸಕ್ರಿಯ: ಪೊಲೀಸರಿಂದ ತನಿಖೆ
ಮಂಜೇಶ್ವರ: ಮಸೀದಿ ಸಹಿತ ರಸ್ತೆ ಬದಿಗಳಲ್ಲಿ ನಿಲ್ಲಿಸಲಾಗುತ್ತಿದ್ದ ಕಾರು ಸಹಿತ ದ್ವಿಚಕ್ರ ವಾಹನಗಳಿಂದ ವಿವಿಧ ಸಾಮಾಗ್ರಿಗಳನ್ನು ಕಳವುಗೈಯ್ಯುವ ತಂಡ ಸಕ್ರಿಯಗೊಂಡಿರುವ ಬಗ್ಗೆ ಆರೋಪಗಳು ಉಂಟಾಗಿದೆ. ಉಪ್ಪಳ, ಹೊಸಂಗಡಿಯಲ್ಲಿ ದ್ವಿಚಕ್ರ ವಾಹನದಿಂದ ಹೆಲ್ಮೆಟ್ ಸಹಿತ ಸಾಮಾಗ್ರಿಗಳು, ಶುಕ್ರವಾರಗಳಂದು ಮಸೀದಿಗಳ ಮುಂಭಾಗದಲ್ಲಿ ಕಾರುಗಳನ್ನು ನಿಲುಗಡೆಗೊಳಿಸಿ ನಮಾಜ್‌ಗೆ ತೆರಳುವವರ ಕಾರುಗಳನ್ನು ಕೇಂದ್ರೀಕರಿಸಿ ಕಳವು ನಡೆಸುತ್ತಿರುವ ತಂಡ ಮಂಜೇಶ್ವರದಲ್ಲಿ ಸಕ್ರಿಯವಾಗಿವೆ. ಕಳವು ಕೃತ್ಯಕ್ಕೆ ಅಪ್ರಾಪ್ತ ಬಾಲಕರನ್ನು ಬಳಸುತ್ತಿರುವ ಬಗ್ಗೆ ಆರೋಪವಿದೆ. ಕೆಲವೊಂದು ಮಂದಿ ಕಾರನ್ನು ಲಾಕ್ ಮಾಡದೆ ಹೋದರೆ ಅದರೊಳ ಗಿನಿಂದ ಸಾಮಾನುಗಳು ಕಳವಾಗುತ್ತಿದೆ.
ಹಲವು ಕಡೆಗಳಲ್ಲಿ ಕಾರಿನ ಲಾಕನ್ನು ತೆರೆಯುವ ಪ್ರಯತ್ನ ನಡೆದು ವಿಫಲಗೊಂಡ ಬಗ್ಗೆಯೂ ದೂರುಗಳು ಕೇಳಿ ಬಂದಿದೆ. ಶುಕ್ರವಾರ ಕುಂಜತ್ತೂರು ಮಸ್ಜಿದ್ ನೂರ್ ಗೆ ಜುಮಾ ನಮಾಜಿಗಾಗಿ ಆಗಮಿಸಿದವರ ಕಾರುಗಳನ್ನು ಕೇಂದ್ರೀಕರಿಸಿ ನಾಲ್ಕು ಮಂದಿ ಅಪ್ರಾಪ್ತ ಬಾಲಕರು ಬಂದು ಕಾರುಗಳ ಬಾಗಿಲುಗಳನ್ನು ತೆರೆಯಲು ಪ್ರಯತ್ನಿಸುತ್ತಿರುವ ದೃಶ್ಯ ಸಿ ಸಿ ಟಿವಿಯಲ್ಲಿ ಸೆರೆಯಾಗಿದೆ. ಒಬ್ಬ ಬಾಲಕ ಮಸೀದಿಯಿಂದ ಹೊರಗೆ ಬಂದು ಹೊರಗಿನಿಂದ ಬಂದ ಉಳಿದ ಮೂವರು ಬಾಲಕರ ಜೊತೆಯಾಗಿ ಕೃತ್ಯದಲ್ಲಿ ಶಾಮೀಲಾಗಿರುವುದು ಸಿ ಸಿ ಕ್ಯಾಮರಾದಲ್ಲಿ ಕಂಡು ಬಂದಿದೆ. ಒಂದು ಕಾರಿನಲ್ಲಿ ಇದ್ದ ಮಹಿಳೆಯೊಬ್ಬರು ನೀಡಿದ ಮಾಹಿತಿಯಂತೆ ಸಿ ಸಿ ಕ್ಯಾಮರಾ ಪರಿಶೋಧಿಸಿ ಪೊಲೀಸರಿಗೆ ಸಿ ಸಿ ಟಿವಿ ದೃಶ್ಯದ ಜೊತೆಯಾಗಿ ದೂರು ನೀಡಲಾಗಿದೆ.ಈ ಬಾಲಕರು ತೂಮಿನಾಡು ಲಕ್ಷಂ ವೀಡು ಕಾಲನಿಯಲ್ಲಿರುವ ಅನ್ಯ ರಾಜ್ಯ ಕೂಲಿ ಕಾರ್ಮಿಕರ ಮಕ್ಕಳೆಂದು ಸಂಶಯ ವ್ಯಕ್ತವಾಗಿದ್ದು. ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ ಬಳಿಕವಷ್ಟೇ ನಿಜ ಸ್ಥಿತಿ ಬಹಿರಂಗಗೊಳ್ಳಬಹುದು. ಬಾಲಕರ ಹಿಂದೆ ಯಾರ ಕೈವಾಡವಿದೆಂiÀÉÄAದು ತಿಳಿದರೆ ಈ ಕೃತ್ಯದ ಸೂತ್ರಧಾರಿಗಳನ್ನು ಕಾನೂನಿನ ಕೈಗೆ ನೀಡಬಹುದಾಗಿದೆ.