ವಿವಿಧ ಪಂ.ಗಳಲ್ಲಿ ಸ್ಕಾವಂಜಿಂಗ್ ಕಾರ್ಮಿಕರು ನೋಂದಾಯಿಸಲು ಕರೆ
ಪೆರ್ಲ: ಎಣ್ಮಕಜೆ ಪಂಚಾ ಯತ್ನಲ್ಲಿ ಮ್ಯಾನುವಲ್ ಸ್ಕಾವಂ ಜಿಂಗ್ ಕೆಲಸ ಮಾಡುವವರು ಇದ್ದರೆ ಈ ತಿಂಗಳ 26ರ ಮುಂಚಿತ ಪಂ. ಕಚೇರಿಗೆ ಆಧಾರ್ ಕಾರ್ಡ್ ಸಹಿತ ತಲುಪಿ ನೋಂದಾಯಿಸಬೇಕೆಂದು ಕಾರ್ಯದರ್ಶಿ ತಿಳಿಸಿದ್ದಾರೆ. ಜಿಲ್ಲೆ ಯಲ್ಲಿ ಸ್ಕಾವಂಜಿಂಗ್ ಕಾರ್ಮಿಕರನ್ನು ಪತ್ತೆಹಚ್ಚಲು ಹಾಗೂ ಅದರಿಂದ ಮುಕ್ತಗೊಳಿಸಲು ವಿವಿಧ ಪಂಚಾ ಯತ್ಗಳಲ್ಲಿ ಸಮೀಕ್ಷೆ ನಡೆಸಲಾ ಗುತ್ತಿದೆ. 2013ರಲ್ಲಿ, 2018ರಲ್ಲಿ ಈ ರೀತಿಯ ಸಮೀಕ್ಷೆ ನಡೆಸಿ ಜಿಲ್ಲೆಯನ್ನು ಮ್ಯಾನುವಲ್ ಸ್ಕಾವಂಜಿಂಗಾಫಿ ಜಿಲ್ಲೆಯಾಗಿ ಘೋಷಿಸಲಾಗಿತ್ತು. ಆದ ರೆ ಅದರ ಉಲ್ಲಂಘನೆ ನಡೆಯುತ್ತಿದೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಹೊಸ ಸರ್ವೇ ನಡೆಸಲು ನಿರ್ದೇಶಿಸಿದೆ. ಈ ಹಿನ್ನೆಲೆ ಯಲ್ಲಿ ಮತ್ತೆ ಸಮೀಕ್ಷೆಗೆ ಚಾಲನೆ ನೀಡಲಾಗಿದೆ.
ದೇಲಂಪಾಡಿ ಪಂಚಾಯತ್ನಲ್ಲಿ ಈ ರೀತಿಯ ಕಾರ್ಮಿಕರ ನೋಂದಾವಣೆ ಈ ತಿಂಗಳ ೨೫ರ ಮುಂಚಿತ ನಡೆಸಬೇಕಾಗಿದೆ. ಪಂಚಾಯತ್ ಕಚೇರಿಗೆ ಆಧಾರ್ ಕಾರ್ಡ್, ಇತರ ದಾಖಲೆಗಳ ಸಹಿತ ತಲುಪಿ ನೋಂದಾಯಿಸಬಹು ದಾಗಿದೆ. ಇದೇ ರೀತಿ ಪೈವಳಿಕೆ ಪಂ.ನಲ್ಲಿ ೨೩, ೨೪ರಂದು, ಚೆಂಗಳ ಪಂ.ನಲ್ಲಿ ೨೫ರಂದು, ಕಾಸರಗೋಡು ನಗರಸಭೆ ಯಲ್ಲಿ ೨೫ರಂದು ನೋಂದಾವಣೆ ನಡೆಸಬೇಕೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಳು ಆಯಾ ಪಂ.ಗಳಿಂದ ಲಭಿಸುವುದು.