ವಿವಿಧ ಬೇಡಿಕೆ ಮುಂದಿಟ್ಟು ಫೋಟೋಗ್ರಾಫರ್ಸ್‌ಗಳಿಂದ ಪ್ರತಿಭಟನಾ ಧರಣಿ
ಕಾಸರಗೋಡು: ಪಾಲುಮೊತ್ತ ವನ್ನು ಹೆಚ್ಚಿಸಿ ಸವಲತ್ತುಗಳನ್ನು ಹೆಚ್ಚಿಸದಿರುವುದನ್ನು ಪ್ರತಿಭಟಿಸಿ ಆಲ್ ಕೇರಳ ಫೋಟೋ ಗ್ರಾಫರ್ಸ್ ಅಸೋಸಿಯೇಶನ್ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾ ಕ್ಷೇಮನಿಧಿ ಕಚೇರಿಯ ಮುಂಭಾಗ ಪ್ರತಿಭಟನಾ ಧರಣಿ ನಡೆಸಲಾಗಿದೆ. ಕ್ಷೇಮನಿಧಿಯಲ್ಲಿ ಸದಸ್ಯರಾಗಿರುವ ಫೋಟೋಗ್ರಾಫರ್ಸ್ ರಿಗೆ ಆದ್ಯತೆ ನೀಡಬೇಕು, ಪಿಂಚಣಿ ಅರ್ಜಿಗಳನ್ನು ಪಾರದರ್ಶಕಗೊಳಿಸಬೇಕು, ಪಿಂಚಣಿ ಮೊತ್ತವನ್ನು 5000 ರೂ. ಆಗಿ ಹೆಚ್ಚಿಸಬೇಕು ಮೊದಲಾದ ಬೇಡಿಕೆ ಒಡ್ಡಿ ಧರಣಿ ನಡೆಸಲಾಗಿದೆ.
ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ರಾಜ್ಯ ಉಪಾಧ್ಯಕ್ಷ ಅಹಮ್ಮದ್ ಶರೀಫ್ ಉದ್ಘಾಟಿಸಿದರು. ಎಕೆಪಿಎ ಜಿಲ್ಲಾಧ್ಯಕ್ಷ ಕೆ.ಸಿ. ಅಬ್ರಹಾಂ ಅಧ್ಯಕ್ಷತೆ ವಹಿಸಿದರು. ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು ಪ್ರಧಾನ ಭಾಷಣ ಮಾಡಿದರು.
ರಾಜ್ಯ ಸಮಿತಿ ಸದಸ್ಯ ಪ್ರಶಾಂತ್ ತೈಕಡಪ್ಪುರಂ, ಶರೀಫ್, ವೇಣು ವಿ.ವಿ, ಪ್ರಜೀತ್, ರಾಜೇಂದ್ರನ್ ವಿ.ಎನ್, ಸುಧೀರ್ ಕೆ, ವಾಸು ಎ, ರೇಖಾ ಮುಳ್ಳೇರಿಯ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಸುಗುಣನ್ ಇರಿಯ ಸ್ವಾಗತಿಸಿ, ಕೋಶಾಧಿಕಾರಿ ಸುನಿಲ್ ಕುಮಾರ್ ವಂದಿಸಿದರು.