ವಿವಿಧ ಬೇಡಿಕೆ ಮುಂದಿರಿಸಿ ಬದಿಯಡ್ಕ ಪಂಚಾಯತ್ ಕಚೇರಿಗೆ ಡಿವೈಎಫ್‌ಐ ಮಾರ್ಚ್
ಬದಿಯಡ್ಕ: ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಡಿವೈಎಫ್‌ಐ ಬದಿಯಡ್ಕ, ನೀರ್ಚಾಲು ವಲಯ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ನಿನ್ನೆ ಬದಿಯಡ್ಕ ಪಂಚಾಯತ್ ಕಚೇರಿಗೆ ಮಾರ್ಚ್ ನಡೆಯಿತು. ಕೇರಳೋತ್ಸವ ಸರಿಯಾದ ರೀತಿಯಲ್ಲಿ ನಡೆಸಲು ಸಾಧ್ಯವಾಗದ ಬದಿಯಡ್ಕ ಪಂಚಾಯತ್ ಯುಡಿಎಫ್ ಆಡಳಿತ ಸಮಿತಿ ಯುವಜನರಿಗೆ ಉತ್ತರ ನೀಡಬೇಕು, ನಾಮಮಾತ್ರ ನಡೆಸಿದ ಸ್ಪರ್ಧೆಗಳ ಟ್ರೋಫಿ ಹಾಗೂ ಪ್ರಮಾಣಪತ್ರಗಳನ್ನು ಕೂಡಲೇ ವಿತರಿಸಬೇಕು, ಇಂಡೋರ್ ಸ್ಟೇಡಿಯಂನ ಸಮಸ್ಯೆಗಳನ್ನು ಪರಿಹರಿಸಿ ಕೂಡಲೇ ಅದನ್ನು ತೆರೆದುಕೊಡಬೇಕು, ಬೋಳುಕಟ್ಟೆ ಮಿನಿಸ್ಟೇಡಿಯಂ ಆಧುನಿಕ ರೀತಿಯಲ್ಲಿ ನವೀಕರಿಸಲು ಅಗತ್ಯದ ಕ್ರಮ ಕೈಗೊಳ್ಳಬೇಕು ಎಂಬೀ ಬೇಡಿಕೆಗಳನ್ನು ಮುಂದಿರಿಸಲಾಯಿತು. ಯುಡಿಎಫ್ ನೇತೃತ್ವ ನೀಡುವ ಪಂಚಾಯತ್ ಆಡಳಿತ ಸಮಿತಿ ಯುವಜನರನ್ನು ಅವಗಣಿಸುವ ನಿಲುವನ್ನು ಮುಂದುವರಿಸಿದರೆ ಪಂಚಾಯತ್‌ಗೆ ಮುತ್ತಿಗೆ ಸಹಿತ ತೀವ್ರ ಚಳವಳಿ ನಡೆಸುವುದಾಗಿ ಡಿವೈಎಫ್‌ಐ ಮುನ್ನೆಚ್ಚರಿಕೆ ನೀಡಿದೆ. ಸಿಪಿಎಂ ಲೋಕಲ್ ಸಮಿತಿ ಕಚೇರಿ ಪರಿಸರದಿಂದ ಆರಂಭಿಸಿದ ಮಾರ್ಚ್ ಡಿವೈಎಫ್‌ಐ ಬ್ಲೋಕ್ ಸೆಕ್ರಟರಿ ನಾಸಿರುದ್ದೀನ್ ಮಲಂಗರ ಉದ್ಘಾಟಿಸಿ ದರು. ನೀರ್ಚಾಲು ವಲಯ ಅಧ್ಯಕ್ಷ ಎಂ.ಎಸ್.ಯೋಗೇಶ್ ಅಧ್ಯಕ್ಷತೆ ವಹಿಸಿ ದರು. ಎಂ.ಎಸ್. ಶ್ರೀಕಾಂತ್, ಸುಬೈರ್ ಬಪಾಲಿಪೊನಂ, ಪಿ. ರಂಜಿತ್, ಚಂದ್ರನ್ ಪೊಯ್ಯಕಂಡ ಮೊದಲಾದವರು ಮಾತ ನಾಡಿದರು. ಬದಿಯಡ್ಕ ವಲಯ ಕಾರ್ಯ ದರ್ಶಿ ಶರತ್ ಕುಮಾರ್ ಸ್ವಾಗತಿಸಿದರು.