ವಿಶ್ವಏಡ್ಸ್ ವಿರುದ್ಧ ದಿನಾಚರಣೆ ಜಾಥಾ
ಮಂಜೇಶ್ವರ: ವಿಶ್ವ ಏಡ್ಸ್ ವಿರುದ್ಧ ದಿನಾಚರಣೆ ಅಂಗವಾಗಿ ಎಚ್ಐವಿ ಅಣುಬಾಧೆ ತಡೆಯಲು, ತಡೆಗಟ್ಟುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಂಜೇಶ್ವರ ಬ್ಲೋಕ್ ಕುಟುಂಬ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ತಿಳುವಳಿಕೆ ಜಾಥಾ ಹಾಗೂ ಜಾಗೃತಿ ತರಗತಿ ಹಮ್ಮಿ ಕೊಳ್ಳಲಾಯಿತು. ಪಂಚಾಯತ್ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಪ್ರಿಯ ಶೆಣೈ ಉದ್ಘಾಟಿಸಿದರು. ವೈದ್ಯಾಧಿಕಾರಿ ಪ್ರಭಾಕರ ರೈ ಅಧ್ಯಕ್ಷತೆ ವಹಿಸಿದರು. ಮುಖ್ಯೋಪಾಧ್ಯಾಯಿನಿ ಸುರೇಖಾ ಮಲ್ಯ ಮಾತನಾಡಿದರು. ಅಖಿಲ್ ಕೆ. ಸ್ವಾಗತಿಸಿ, ಶೈಲಜಾ ಎ. ವಂದಿಸಿದರು. ಜನಪ್ರತಿನಿಧಿ ಗಳು, ವಿದ್ಯಾರ್ಥಿಗಳು, ಆಶಾಕಾರ್ಯ ಕರ್ತೆಯರು ಭಾಗವಹಿಸಿದರು.