ವಿಶ್ವಕರ್ಮ ಸಮಾಜ ಮುಂದಾಳು ಮೋಹನ ಆಚಾರ್ಯ ನಿಧನ
ಉಪ್ಪಳ: ವಿಶ್ವಕರ್ಮ ಸಮಾ ಜದ ಹಿರಿಯ ಮುಂದಾಳು, ಧಾರ್ಮಿಕರಂಗದಲ್ಲಿ ಸಕ್ರಿಯರಾಗಿದ್ದ ಉಪ್ಪಳ ಅಂಬಾರು ನಿವಾಸಿ ಮಾಕೂರು ಮೋಹನ ಆಚಾರ್ಯ (85) ಇಂದು ಮುಂಜಾನೆ ನಿಧನ ಹೊಂದಿದರು. ಈ ಹಿಂದೆ ಬಂಬ್ರಾಣ ಪರಿಸರದಲ್ಲಿ ಬಡಗಿ ವೃತ್ತಿ ನಡೆಸುತ್ತಿದ್ದರು. ಆನೆಗುಂದಿ ಪ್ರತಿಷ್ಠಾ ನದ ವಿಶ್ವಸ್ಥರಾಗಿ, ಮಧೂರು ಶ್ರೀ ಕಾಳಿಕಾಂಬ ಮಠದ ಆಡಳಿತ ಸಮಿತಿಯಲ್ಲಿ ಉಪಾಧ್ಯಕ್ಷ, ಕೋಶಾಧಿ ಕಾರಿ, ಅಧ್ಯಕ್ಷ, ಬ್ರಹ್ಮಕಲಶ ಸಮಿತಿ ಪದಾಧಿಕಾರಿ ಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಸಾವಿತ್ರಿ ಎಂ. ಆಚಾರ್ಯ, ಸಹೋದರ ಗಣೇಶ ಆಚಾರ್ಯ,ಸಹೋದರಿ ಕಮಲಾ ಆಚಾರ್ಯ ಬನ್ನೂರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.