ವಿ.ಹಿಂ.ಪ ಕಾರ್ಯಕರ್ತ ದುಬಾಯಲ್ಲಿ ಹೃದಯಾಘಾತದಿಂದ ನಿಧನ
ಮಂಜೇಶ್ವರ: ಗಲ್ಫ್‌ನಲ್ಲಿ ಉದ್ಯೋ ಗದಲ್ಲಿದ್ದ ವಿಶ್ವಹಿಂದೂ ಪರಿಷತ್‌ನ ಸಕ್ರಿಯ ಕಾರ್ಯಕರ್ತ ಹೃದಯಾ ಘಾತದಿಂದ ನಿಧನಹೊಂದಿದರು.
ಹೊಸಂಗಡಿ ನಿವಾಸಿ ದಿ| ಕಮಲಾಕ್ಷ ಭಂಡಾರಿಯವರ ಪುತ್ರ ಮಹೇಶ್ ಭಂಡಾರಿ (42) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಗಲ್ಫ್‌ನಲ್ಲಿ ಉದ್ಯೋಗಿಯಾಗಿದ್ದ ಇವರಿಗೆ ಕಳೆದ ಗುರುವಾರ ಅಲ್ಲಿ ಹೃದಯಾಘಾತ ವುಂಟಾಗಿತ್ತು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹ ವನ್ನು ಇಂದು ಮಧ್ಯಾಹ್ನ ದೊಳಗೆ ಹೊಸಂಗಡಿಯ ಸ್ವ-ಗೃಹಕ್ಕೆ ತಲುಪಿ ಸಲಾಗುವುದೆಂದು ಸಂಬಂಧಿ ಕರು ತಿಳಿಸಿದ್ದಾರೆ. ಮೃತರು ತಾಯಿ ಪವನಾಕ್ಷಿ, ಪತ್ನಿ ಯೋಗಿತ, ಸಹೋದರ ರವಿರಾಜ, ಸಹೋದರಿ ವಿಜಯಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಈ ಹಿಂದೆ ಕಾಸರಗೋಡಿನಲ್ಲಿದ್ದ ಮಹೇಶ್ ಭಂಡಾರಿ ಕಾಸರಗೋಡು ಎಸ್.ವಿ.ಟಿ ಫ್ರೆಂಡ್ಸ್ ಸರ್ಕಲ್‌ನ ಮಾಜಿ ಪ್ರಧಾನ ಕಾರ್ಯದರ್ಶಿಯಾ ಗಿದ್ದಾರೆ. ಅಲ್ಲದೆ ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದ ಸಕ್ರಿಯ ಕಾರ್ಯಕರ್ತ, ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಅಷ್ಟಮಿ ಸಮಿತಿಯ ಸದಸ್ಯ, ಬಿಜೆಪಿ ೩೨ನೇ ವಾರ್ಡ್ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಕಾಸರಗೋಡು ಎಸ್‌ವಿಟಿ ಫ್ರೆಂಡ್ಸ್ ಸರ್ಕಲ್‌ನ ಸ್ಥಾಪಕ ಕೆ.ಎನ್. ವೆಂಕಟ್ರ ಮಣ ಹೊಳ್ಳ, ಬಿಜೆಪಿ ನಗರಸಮಿತಿ ಉಪಾಧ್ಯಕ್ಷ ದಯಾನಂದ ಕೊಳ್ಕೆಬೈಲು, ನಗರಸಭಾ ವಿಪಕ್ಷ ನಾಯಕ ಪಿ. ರಮೇಶ್, ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಯಜ್ಞ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಆರ್, ವಿ.ಹಿಂ.ಪ ನಗರಸಮಿತಿ ಜತೆ ಕಾರ್ಯದರ್ಶಿ ಕಿಶೋರ್ ಕುಮಾರ್, ಉಪಾಧ್ಯಕ್ಷ ಕೆ.ಎನ್. ರಾಮಕೃಷ್ಣ ಹೊಳ್ಳ ಸಹಿತ ಬಿಜೆಪಿ-ಸಂಘಪರಿವಾರದ ಹಲವು ನೇತಾರರು ಹೊಸಂಗಡಿಗೆ ತೆರಳಿ ಮೃತರ ಕುಟುಂಬಕ್ಕೆ ಸಾಂತ್ವನ ನುಡಿದರು.