ವಿ.ಹಿಂ.ಪ. ಪ್ರಾಶಿಕ್ಷಣ ವರ್ಗ 19ರಿಂದ
ಉಪ್ಪಳ: ವಿಶ್ವಹಿಂದೂ ಪರಿಷತ್ ದುರ್ಗಾವಾಹಿನಿ ಕೇರಳ ಪ್ರಾಂತ್ಯ ಮಟ್ಟದ ಪ್ರಶಿಕ್ಷಣ ವರ್ಗ ಮೇ 19ರಿಂದ 27ರ ತನಕ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜುನಲ್ಲಿ ನಡೆಯಲಿದೆ. 9ನೇ ತರಗತಿಯಿಂದ ಮೇಲ್ಪಟ್ಟು, 35 ವರ್ಷದ ಕೆಳಗಿನ, ಮಕ್ಕಳು, ಯುವತಿಯರು ಭಾಗವಹಿಸಬಹುದಾಗಿದೆ. ಹಿಂದೂ ಸಮಾಜದಲ್ಲಿ ಅಸ್ವಸ್ಥತೆ ಉಂಟುಮಾಡಿರುವ ಲವ್ ಜಿಹಾದ್, ಮತಾಂತರ, ಮಾದಕದ್ರವ್ಯ ವ್ಯಸನ ಮೊದಲಾದ ಪಿಡುಗುಗಳ ವಿರುದ್ಧ ಜಾಗೃತಿ ಉಂಟುಮಾಡುವ ಹಾಗೂ ಮಹಿಳೆಯರಿಗೆ ದೈಹಿಕ, ಬೌದ್ಧಿಕ, ಮಾನಸಿಕ ಆತ್ಮಬಲವನ್ನು ಹೆಚ್ಚಿಸುವ ಹಲವು ವಿಚಾರಗಳು ಶಿಬಿರದಲ್ಲಿ ಲಭಿಸಲಿದೆ.ಈ ಹಿನ್ನೆಲೆಯಲ್ಲಿ ಹೆಚ್ಚಿನ ಮಹಿಳೆಯರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿಎಚ್ಪಿ ದುರ್ಗಾವಾಹಿನಿ ಸಂಚಲನ ಸಮಿತಿ ಪದಾಧಿಕಾರಿಗಳು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿ 6238881747ರಿಂದ ಲಭಿಸುವುದು.