ವಿ.ಹಿಂ.ಪ ಬದಿಯಡ್ಕ ಪ್ರಖಂಡ ವತಿಯಿಂದ ಗೋಪೂಜೆ ನಾಳೆ
ಬದಿಯಡ್ಕ: ವಿಶ್ವಹಿಂದೂ ಪರಿಷತ್ ಬದಿಯಡ್ಕ ಪ್ರಖಂಡ ಇದರ ಆಶ್ರಯದಲ್ಲಿ ಗೋಪೂಜಾ ಕಾರ್ಯಕ್ರಮ ನಾಳೆ ಸಂಜೆ ೩.೩೦ರಿಂದ ಬದಿಯಡ್ಕದಲ್ಲಿ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಬೋಳುಕಟ್ಟೆ ಮೈದಾನದಿಂದ ಶೋಭಾಯಾತ್ರೆ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಖಂಡ ಅಧ್ಯಕ್ಷ ಸುನಿಲ್ ಕಿನ್ನಿಮಾಣಿ ಅಧ್ಯಕ್ಷತೆ ವಹಿಸುವರು. ವಿಶ್ವಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ, ಉದ್ಯಮಿ ವಸಂತ ಪೈ ಉದ್ಘಾಟಿಸುವರು. ರಾಷ್ಟ್ರರಕ್ಷಣಾ ಪಡೆ ಸಂಸ್ಥಾಪಕ, ಅಧ್ಯಕ್ಷ ಪುನೀತ್ ಕೆರೆಹಳ್ಳಿ, ಬಜರಂಗದಳ ಕ್ಷೇತ್ರೀಯ ಸಂಯೋಜಕ್ ಜಿಜೇಶ್ ಪಟ್ಟೇರಿ ಧಾರ್ಮಿಕ ಭಾಷಣ ಮಾಡುವರು. ಚಂದ್ರಶೇಖರ್, ಮೀರಾ ಆಳ್ವ ಶುಭ ಕೋರುವರು. ಸಂಕಪ್ಪ ಭಂಡಾರಿ ಬಳ್ಳಂಪೆಟ್ಟು, ಯಾದವ ಕೀರ್ತೇಶ್ವರ, ಸುರೇಶ್ ಪರಂಕಿಲ, ಧನ್‌ರಾಜ್ ಕಿನ್ನಿಮಾಣಿ, ಗಣೇಶ್ ಮಾವಿನಕಟ್ಟೆ, ರಮೇಶ್ ಪದ್ಮಾರ್, ಮಂಜುನಾಥ ಡಿ. ಮಾನ್ಯ ಸಹಿತ ಹಲವರು ಉಪಸ್ಥಿತರಿರುವರು. ಶೋಭಾಯಾತ್ರೆ ಯಲ್ಲಿ ವಿವಿಧ ಭಜನಾ ಸಂಘಗಳಿಂದ ಕುಣಿತ ಭಜನೆ ನಡೆಯಲಿದೆ.
ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಕನ್ನಡಿಗ ಎಸ್. ಮುರಳೀಕೃಷ್ಣ ಅಧಿಕಾರ ಸ್ವೀಕಾರ
ಕಾಸರಗೋಡು: ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿ ಯಾಗಿ ಕನ್ನಡಿಗರಾದ ಎಸ್. ಮುರಳೀಕೃಷ್ಣ ಅವರು ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ಸ್ವೀಕರಿಸಿದರು. ಮೂಲತಃ ನೀರ್ಚಾಲು ಬಳಿಯ ಕುಂಟಿಕಾನ ಶಂಕರಮೂಲೆ ನಿವಾಸಿಯಾದ ಗಂಗಾಧರ ಭಟ್-ಉಷಾ ದಂಪತಿಯ ಪುತ್ರ ನಾದ ಮುರಳೀಕೃಷ್ಣ ಪ್ರಸ್ತುತ ಕಾಞಂಗಾಡ್ ಬಳಿಯ ಇರಿಯದಲ್ಲಿ ವಾಸಿಸುತ್ತಿದ್ದಾರೆ. ಕಲ್ಲಿಕೋಟೆ ಜಿಲ್ಲಾ ನ್ಯಾಯಾಧೀಶರಾಗಿದ್ದಾಗ ಹೈಕೋರ್ಟ್‌ನ ನ್ಯಾಯಮೂ ರ್ತಿಯಾಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಕಾಞಂಗಾಡ್ ಬಾರ್‌ನ ನ್ಯಾಯವಾದಿಯಾಗಿದ್ದರು.
ಪಿ. ಕೃಷ್ಣ ಕುಮಾರ್, ಕೆ.ವಿ. ಜಯಕುಮಾರ್, ಜೋಬಿನ್ ಸೆಬಾಸ್ಟಿ ಯನ್,ಪಿ.ವಿ. ಬಾಲಕೃಷ್ಣನ್ ಎಂಬಿವರುಕೂಡಾ ಹೈ ಕೋರ್ಟ್‌ನ ನ್ಯಾಯ ಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.