ವೃತ್ತಿಯ ಘನತೆ ಕಾಪಾಡಿಕೊಂಡಾಗ ಶ್ರೇಷ್ಠ ಶಿಕ್ಷಕನಾಗಲು ಸಾಧ್ಯ-ಎಡನೀರು ಶ್ರೀ
ಎಡನೀರು: ವೃತ್ತಿಯ ಘನತೆ ಗೌರವಗಳನ್ನು ಕಾಪಾಡಿಕೊಂಡು ಜೀವನದಲ್ಲಿ ಹಾಗೂ ಸಮಾಜದ ಒಳಿತಿಗಾಗಿ ಉತ್ತಮ ಕೆಲಸ ನಿರ್ವಹಿಸಿದರೆ ಮಾತ್ರವೇ ಆತನೊಬ್ಬ ಶ್ರೇಷ್ಠ ಅಧ್ಯಾಪಕನಾಗಲು ಸಾಧ್ಯವೆಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು.
೩೨ ವರ್ಷದ ಅಧ್ಯಾಪಕ ವೃತ್ತಿಯನ್ನು ಪೂರ್ತಿ ಗೊಳಿಸಿ ನಿವೃತ್ತಿ ಹೊಂದುವ ಎಡನೀರು ನಿವಾಸಿ ಸೂರ್ಯನಾರಾ ಯಣ ಭಟ್ರಿಗೆ ಎಡನೀರು ಮಠದ ವತಿಯಿಂದ ನೀಡಿದ ಅಭಿನಂದನಾ ಸಮಾರಂಭ ದಲ್ಲಿ ಅವರು ಆಶೀರ್ವಚನ ನೀಡಿದರು. ಚಿನ್ಮಯ ವಿದ್ಯಾಲಯದ ಸ್ವಾಮಿ ವಿವಿಕ್ತಾನಂದ ಸರಸ್ವತಿ ಮುಖ್ಯ ಅತಿಥಿಯಾಗಿದ್ದರು. ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ಅಬೂಬ ಕರ್ ಹಾಜಿ ಶುಭ ಹಾರೈಸಿದರು. ಅಭಿನಂದನೆಗೆ ಸೂರ್ಯನಾರಾಯಣ ಭಟ್ ಕೃತಜ್ಞತೆ ಸಲ್ಲಿಸಿದರು. ಮುರಳೀಕೃಷ್ಣ ಸನ್ಮಾನಪತ್ರ ವಾಚಿಸಿದರು. ಸ್ಮಿತಾ ಪ್ರಾರ್ಥನೆ ಹಾಡಿದರು. ಕೆ. ಸತೀಶ್ ರಾವ್ ಸ್ವಾಗತಿಸಿ, ಅಧ್ಯಾಪಕ ಭವಾನಿಶಂಕರ ವಂದಿಸಿದರು. ನಿವೃತ್ತ ಶಿಕ್ಷಣಾಧಿಕಾರಿ ವೇಣುಗೋಪಾಲ ಎಡನೀರು ನಿರೂಪಿಸಿದರು.