ವೃದ್ಧೆಯರ ಕುತ್ತಿಗೆಯಿಂದ ಕಸಿದ ಆರೂವರೆಪವನ್ ಚಿನ್ನ ಪತ್ತೆ: ಆರೋಪಿಗೆ ರಿಮಾಂಡ್
ಹೊಸದುರ್ಗ: ವೃದ್ಧೆಯರ ಕುತ್ತಿಗೆಯಿಂದ ಕಸಿದೊಯ್ದ ಚಿನ್ನದ ಮಾಲೆಗಳನ್ನು ಪಯ್ಯನ್ನೂರಿನ ಜ್ಯುವೆಲ್ಲರಿಯಲ್ಲಿ ಮಾರಾಟಗೈದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕಳೆದದಿನ ಸೆರೆಗೀಡಾದ ಅಡೂರು ಪುದಿಯಪುರಯಿಲ್ ಹೌಸ್‌ನ ಲಿಜೇಶ್‌ನನ್ನು ಪೊಲೀಸರು ಕರೆದೊಯ್ದು ನಡೆಸಿದ ಮಾಹಿತಿ ಸಂಗ್ರಹದ ವೇಳೆ ಚಿನ್ನ ಪತ್ತೆಹಚ್ಚಲಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪಳೆಯಂಗಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕುರುವಂಙಾಡ್ ಎಂಬಲ್ಲಿ ೭೫ರ ಹರೆಯದ ವೃದ್ಧೆಯ ಕುತ್ತಿಗೆಯಿಂದ ಕಸಿದು ಅಪಹರಿಸಿದ ಚಿನ್ನದ ಸರ ಹಾಗೂ ಪರಶ್ಶಿನಿಯ ವೃದ್ಧೆಯ ಕುತ್ತಿಗೆಯಿಂದ ಕಸಿದ ಮೂರೂವರೆ ಪವನ್ ಚಿನ್ನದ ಸರವನ್ನು ಪತ್ತೆಹಚ್ಚಲಾಗಿದೆ. ಮಾಲೆಯನ್ನು ಅಪಹರಿಸಿದ ಘಟನೆಗೆ ಸಂಬಂಧಿಸಿ ಪೊಲೀಸರು ಕೇಸು ದಾಖಲಿಸಿಕೊಂ ಡಿರಲಿಲ್ಲ. ತಳಿಪರಂಬ ಡಿವೈಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಪಿ. ಬಾಲ ಕೃಷ್ಣನ್ ನಾಯರ್ ಹಾಗೂ ಇನ್‌ಸ್ಪೆಕ್ಟರ್ ಕೆ.ಪಿ. ಶೈನ ಎಂಬಿವರು ನಡೆಸಿದ ತನಿ ಖೆಯಲ್ಲಿ ಆರೋಪಿಯಾದ ಲಿಜೇಶ್ ನನ್ನು ಬಂಧಿಸಲಾಗಿದೆ. ಮಾಹಿತಿ ಸಂಗ್ರಹದ ಬಳಿಕ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಆರೋಪಿಗೆ ಎರಡು ವಾರಗಳ ರಿಮಾಂಡ್ ವಿಧಿಸಲಾಗಿದೆ. ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಇರುವ ೨೫೦ಕ್ಕೂ ಹೆಚ್ಚು ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆಹಚ್ಚಲಾಗಿದೆ. ನಕಲಿ ನಂಬ್ರ ಪ್ಲೇಟ್ ಅಳವಡಿಸಿದ ಸ್ಕೂಟರ್‌ನಲ್ಲಿ ಸಂಚರಿಸಿ ಆರೋಪಿ ಮಾಲೆ ಕಸಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಚಂದೇರದ ಒಂದು ಕಾರಿನ ನಂಬ್ರಪ್ಲೇಟ್ ಕಳವುಗೈದು ಸ್ಕೂಟರ್‌ಗೆ ಅಳವಡಿಸಲಾಗಿತ್ತು. ಲಿಜೇಶ್ ವಿರುದ್ಧ ಶ್ರೀಕಂಠಾಪುರ, ಮಟ್ಟನ್ನೂರು, ಚೊಕ್ಲಿ ಠಾಣೆಗಳಲ್ಲಿ ಮಾಲೆ ಅಪಹರಣ ಪ್ರಕರಣ ದಾಖಲಾಗಿದೆ.