ವ್ಯಕ್ತಿಯ ಪತ್ನಿಯ ಮೊಬೈಲ್ ನಂಬ್ರ ಕೇಳಿದ ಯುವಕನಿಗೆ ಧರ್ಮದೇಟು
ಬದಿಯಡ್ಕ: ಪತಿ ಯೊಂದಿಗೆ ಆತನ ಪತ್ನಿಯ ಮೊಬೈಲ್ ನಂಬ್ರ ಕೇಳಿ ಯುವ ಕನೋರ್ವ ಧರ್ಮದೇಟು ತಿಂದ ಘಟನೆ ಬದಿಯಡ್ಕದಲ್ಲಿ ನಡೆದಿದೆ.
ಬದಿಯಡ್ಕ ಠಾಣೆ ವ್ಯಾಪ್ತಿಯ ನಿವಾಸಿಯಾದ ವ್ಯಕ್ತಿಯೋರ್ವನೊಂದಿಗೆ ಆತನ ಪತ್ನಿಯ ಮೊಬೈಲ್ ನಂಬ್ರವನ್ನು ಯುವಕನೋರ್ವ ಕೇಳಿ ದ್ದಾನೆನ್ನಲಾಗಿದೆ. ಇದರಿಂದ ರೋಷಗೊಂಡ ವ್ಯಕ್ತಿಯೋ ರ್ವನ ಕಪಾಲಕ್ಕೆ ಬಾರಿಸಿದ್ದಾನೆ. ಹಲ್ಲೆಯಿಂದ ಗಾಯಗೊಂಡ ಯುವಕ ಪೊಲೀಸ್ ಠಾಣೆಗೆ ತಲುಪಿ ದೂರು ನೀಡಿದ್ದಾನೆ. ಪೊಲೀಸರು ನಡೆಸಿದ ತನಿಖೆ ವೇಳೆ ಘಟನೆಯೇನೆಂದು ತಿಳಿದುಬಂದಿದೆ.