ವ್ಯಕ್ತಿ ನಾಪತ್ತೆ- ದೂರು
ಬದಿಯಡ್ಕ: ವಿದ್ಯಾಗಿರಿ ಪಿಲಾತ್ತಡ್ಕ ನಿವಾಸಿ ಸುಕುಮಾರನ್ ಕೆ.ಎಂ.(65) ಎಂಬವರು ಕಳೆದ ನ.21ರಿಂದ ನಾಪತ್ತೆಯಾದ ಬಗ್ಗೆ ಬದಿಯಡ್ಕ ಠಾಣೆಯಲ್ಲಿ ದೂರು ದಾಖಲಾಗಿದೆ. ಕೃಶಕಾಯ, ಕನ್ನಡ, ಮಲಯಾಳ, ತುಳು, ತಮಿಳು, ಇಂಗ್ಲಿಷ್, ಹಿಂದಿ ಭಾಷೆಗಳನ್ನು ಮಾತನಾಡುವ ಇವರು ಸುಮಾರು 165 ಸೆ.ಮೀ. ಎತ್ತರವಿದ್ದು, ತಲೆ ಕೂದಲು ಬಿಳಿಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇವರ ಬಗ್ಗೆ ಯಾರಿಗಾದರೂ ಮಾಹಿತಿ ಲಭಿಸಿದರೆ ಬದಿಯಡ್ಕ ಠಾಣೆಯ 9497980914ರಲ್ಲಿ ಸಂಪರ್ಕಿಸುವAತೆ ಪೊಲೀಸರು ತಿಳಿಸಿದ್ದಾರೆ.