ವ್ಯಕ್ತಿ ರೈಲು ಢಿಕ್ಕಿ ಹೊಡೆದು ಸಾವು
ಹೊಸದುರ್ಗ: ತೃಕ್ಕರಿಪುರ ಬಳಿಯ ಒಳವರ ಎಂಬಲ್ಲಿ ವ್ಯಕ್ತಿಯೋರ್ವರು ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಾತಮಂಗಲ ನಿವಾಸಿಯೂ ಕರಿವೆಳ್ಳೂರು ನೆಡುವಪ್ರಂ ಶ್ರೀ ಮಹಾವಿಷ್ಣು ಕ್ಷೇತ್ರ ಸಮೀಪ ವಾಸಿಸುವ ಕೆ.ಕೆ.ಪಿ ನಾರಾಯಣ ಪೊದುವಾಳ್ (74) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ ಒಳವರ ಸೇತುವೆ ಸಮೀಪ ಮೃತದೇಹ ಪತ್ತೆಯಾಗಿದೆ. ಮೃತರು ಪತ್ನಿ ಶಾರದ, ಮಕ್ಕಳಾದ ಸುರೇಶ್ (ಫೋಟೋಗ್ರಾಫರ್), ರಾಹುಲ್ (ಟೆಕ್ನೋಪಾರ್ಕ್) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.