ವ್ಯಾಪಾರಿಗಳು ಆಡಳಿತ ರಂಗದಲ್ಲಿ ನಿರ್ಣಾಯಕ ಶಕ್ತಿಯಾಗಬೇಕು-ದೇವಸ್ಯ ಮೇಚೇರಿ
ಕಾಸರಗೋಡು: ಕೇರಳದ ಆದಾಯದಲ್ಲಿ ನಿರ್ಣಾಯಕ ಶಕ್ತಿಯಾಗಿ ಬದಲಾದ ವ್ಯಾಪಾರಿಗಳು ಕಾರುಣ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದು ಆಡಳಿತ ರಂಗದಲ್ಲಿ ನಿರ್ಣಾಯಕ ಶಕ್ತಿಯಾಗಿ ಬದಲಾಗಬೇಕೆಂದು ಕೆವಿವಿಇಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಸ್ಯ ಮೇಚೇರಿ ನುಡಿದರು. ಕೆವಿವಿಇಎಸ್ ಜಿಲ್ಲಾ ಕೌನ್ಸಿಲ್ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಹಲವು ರೀತಿಯ ಕಾನೂನು ವ್ಯವಸ್ಥೆಗಳಿಂದಾಗಿ ಸಣ್ಣ ವ್ಯಾಪಾರಿಗಳು ಸಂದಿಗ್ಧತೆಯಲ್ಲಿದ್ದಾರೆ. ವ್ಯಾಪಾರಿಗಳ ಹಕ್ಕನ್ನು ಸಂರಕ್ಷಿಸಲು ಸಂಘಟನೆ ಆಡಳಿತ ರಂಗದಲ್ಲಿ ನಿರ್ಣಾ ಯಕ ಶಕ್ತಿಯಾಗಬೇಕೆಂದು ಅವರು ನುಡಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಅಧ್ಯಕ್ಷರಾಗಿ ಕೆ. ಅಹಮ್ಮದ್ ಶರೀಫ್ ರನ್ನು ಪುನರಾಯ್ಕೆ ಮಾಡಲಾಯಿತು. ಸತತ 16ನೇ ವರ್ಷದಲ್ಲೂ ಇವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಜೆ. ಸಜಿ, ಕೋಶಾಧಿಕಾರಿಯಾಗಿ ಮಾಹಿನ್ ಕೋಳಿಕ್ಕರರನ್ನು ಆರಿಸಲಾಯಿತು. ಜಿಲ್ಲಾ ಉಪಾಧ್ಯಕ್ಷರಾಗಿ ಪಿ.ಪಿ. ಮುಸ್ತಫ, ಎ.ಎ. ಅಸೀಸ್, ಸಿ. ಹಂಸ ಪಾಲಕಿ, ಸಿ. ಎಚ್. ಶಂಸುದ್ದೀನ್, ಥೋಮಸ್ ಕಾನಾಟ್, ಎ.ವಿ. ಹರಿಹರಸುತನ್, ಶಿಹಾಬ್ ಉಸ್ಮಾನ್, ಬಷೀರ್ ಕನಿಲ, ಸಿ.ಎಚ್. ಅಬ್ದುಲ್ ಕರೀಂ, ಜಿಲ್ಲಾ ಕಾರ್ಯದರ್ಶಿಗಳಾಗಿ ಕುಂಞಿರಾ ಮನ್, ಆಕಾಶ್, ಕೆ. ದಿನೇಶ್, ಬಿ.ಎಂ. ಶೆರೀಫ್, ಅನ್ವರ್ ಸಾದಾತ್, ಟಿ.ಎ. ಅಬ್ದುಲ್ ಸಲೀಂ, ಯು.ಎ. ಆಶಿಫ್ ಸಿ.ಕೆ, ಕೆ.ವಿ. ದಾಮೋದರನ್, ಪಿ. ಮುಹಮ್ಮದ್ ಕುಂಞಿ ಕುಂಜಾರ್, ವಿ.ಕೆ. ಉಣ್ಣಿಕೃಷ್ಣನ್ ಆಯ್ಕೆಯಾದರು. ರಾಜ್ಯ ಕಾರ್ಯಾಧ್ಯಕ್ಷ ಕುಂಞಾವು ಹಾಜಿ ಪ್ರಧಾನ ಭಾಷಣ ಮಾಡಿದರು. ರಾಜ್ಯ ಕೋಶಾಧಿಕಾರಿ ಎಸ್. ದೇವ ರಾಜನ್, ರಾಜ್ಯ ಪದಾಧಿಕಾರಿಗಳಾದ ಎಂ.ಕೆ. ಥೋಮಸ್ ಕುಟ್ಟಿ, ಬಾಬು ಕೋಟೆಯಿಲ್, ನ್ಯಾಯವಾದಿ ಎ.ಜೆ. ರಿಯಾಸ್ ಮಾತನಾಡಿದರು.