ವ್ಯಾಪಾರಿಗಳ ಮುಷ್ಕರ ಜಿಲ್ಲೆಯಲ್ಲಿ ಪೂರ್ಣ
ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ವ್ಯಾಪಾರಿಗಳು ನಿನ್ನೆ ನಡೆಸಿದ ಸೆಕ್ರೆಟರಿಯೇಟ್ ಮಾರ್ಚ್ನಂಗವಾಗಿ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕರೆ ನೀಡಿದ ಮುಷ್ಕರ ಪೂರ್ಣವಾಗಿತ್ತು. ಹೋಟೆಲ್ಗಳ ಸಹಿತ ಜಿಲ್ಲೆಯ ಸಾವಿರಾರು ವ್ಯಾಪಾರಸಂಸ್ಥೆಗಳನ್ನು ನಿನ್ನೆ ಮುಚ್ಚುಗಡೆಗೊಳಿಸಿ ಸರಕಾರಕ್ಕೆ ತಮ್ಮ ಪ್ರತಿಭಟನೆಯನ್ನು ತಿಳಿಸಲಾಗಿದೆ. ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಾಣಬೇಕೆಂದು ಒತ್ತಾಯಿಸಿ ಕಾಸರಗೋಡಿನಿಂದ ಆರಂಭಿಸಿದ ಸಂರಕ್ಷಣಾ ಯಾತ್ರೆಯ ಸಮಾರೋಪ ದಂಗವಾಗಿ ಸೆಕ್ರೆಟರಿಯೇಟ್ ಮಾರ್ಚ್ ನಡೆಸಲಾಗಿದೆ. ೫ ಲಕ್ಷ ಮಂದಿಯ ಸಹಿ ಒಳಗೊಂಡ ವ್ಯಾಪಾರಿಗಳ ವಿವಿಧ ಬೇಡಿಕೆಗಳನ್ನು ಮನವಿಯಲ್ಲಿ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು.