ವ್ಯಾಪಾರಿ ಸಮಿತಿಯಿಂದ ಬಿ.ವಿ. ರಾಜನ್‌ರಿಗೆ ಶ್ರದ್ಧಾಂಜಲಿ
ಮಂಜೇಶ್ವರ: ಅಗಲಿದ ಸಿಪಿಐ ಮುಖಂಡ ಬಿ.ವಿ ರಾಜನ್‌ರಿಗೆ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮಂಜೇಶ್ವರ ಘಟಕ ಹಾಗೂ ಮಂಜೇಶ್ವರ ಅಭಿವೃದ್ದಿ ಕ್ರಿಯಾ ಸಮಿತಿ ವತಿಯಿಂದ ಶ್ರದಾಂಜಲಿ ಸಭೆ ಮಂಜೇಶ್ವರ ರೈಲ್ವೇ ನಿಲ್ದಾಣ ಬಳಿಯಲ್ಲಿ ನಡೆಯಿತು. ಪಂಚಾಯತ್ ಅಧ್ಯಕ್ಷೆ ಜೀನ್ ಲವಿನ ವೆÆಂತೇರೋ, ಡಾ.ಯು.ಎ ಖಾದರ್, ವಿವಿಧ ರಾಜಕೀಯ ನೇತಾರರಾದ ಕೆ.ಆರ್ ಜಯಾನಂದ, ಹರ್ಷಾದ್ ವರ್ಕಾಡಿ, ಯಾಕೂಬ್ ಕುಂಜತ್ತೂರು, ಬಶೀರ್, ಅಶ್ರಫ್ ಬಡಾಜೆ, ಹಮೀದ್ ಹೊಸಂಗಡಿ, ಹರಿಶ್ಚಂದ್ರ ಮಂಜೇಶ್ವರ, ಬಶೀರ್ ಕನಿಲ, ಮಜೀದ್ ಭಾಗವಹಿಸಿದರು.