ಶಬರಿಮಲೆಗೆ ಹರಿದುಬರತೊಡಗಿರುವ ಅಭೂತಪೂರ್ವ ಭಕ್ತಜನ ಪ್ರವಾಹ

ಶಬರಿಮಲೆ: ಶಬರಿಮಲೆಯಲ್ಲಿ ಮಂಡಲಪೂಜೆ ಉತ್ಸವಕ್ಕೆ ದಿನಗಳು ಮಾತ್ರವೇ ಬಾಕಿ ಉಳಿದುಕೊಂಡಿರು ವಂತೆಯೇ ಶಬರಿಮಲೆಗೆ ಭಾರೀ ಸಂಖ್ಯೆಯಲ್ಲಿ ಭಕ್ತಜನ ಪ್ರವಾಹವೇ ಹರಿದುಬರತೊಡಗಿದೆ. ಇದರಿಂದಾಗಿ ಶಬರಿಮಲೆ ಮತ್ತು ಪರಿಸರ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ ಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಮಾತ್ರವಲ್ಲ ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಎಲ್ಲೆಡೆ ಬಿಗು ಪೊಲೀಸ್ ನಿಯಂತ್ರಣ ಏರ್ಪಡಿಸಲಾಗಿದೆ.

 ಶಬರಿಮಲೆಗೆ ಹರಿದುಬರು ತ್ತಿರುವ ಅಭೂತಪೂರ್ವ ಭಕ್ತಜನ ಪ್ರವಾಹಕ್ಕೆ ಹೊಂದಿಕೊಂಡು ಇನ್ನೊಂದೆಡೆ ವರ್ಚು ವಲ್ ಕ್ಯೂ  ಸಂಖ್ಯೆಗೂ ಮುಜರಾಯಿ ಮಂಡಳಿ ಕತ್ತರಿ ಹಾಕಿದೆ. ಮಾತ್ರವಲ್ಲ ಸ್ಪೋಟ್ ಬುಕ್ಕಿಂಗ್ ಸೌಕರ್ಯವನ್ನು ತಾತ್ಕಾಲಿಕವಾಗಿ ಹೊರತುಪಡಿಸುವ ತೀರ್ಮಾನವನ್ನೂ ಕೈಗೊಂಡಿದೆ. ಇದರಂತೆ ಡಿಸೆಂಬರ್ 25ರ ತನಕ ವರ್ಚುವಲ್ ಕ್ಯೂ ಮೂಲಕ ೫೪ ಸಾವಿರ ತೀರ್ಥಾಟಕರಿಗೆ ಮಾತ್ರವೇ ದರ್ಶನ ಸೌಕರ್ಯ ಏರ್ಪಡಿಸಲಾ ಗುವುದು. ಡಿಸೆಂಬರ್ 26ರಂದು ಪ್ರತಿನಿತ್ಯ ದಶನಕ್ಕೆ ಬರುವ ತೀರ್ಥಾಟಕರ ಸಂಖ್ಯೆಯನ್ನು 60 ಸಾವಿರಕ್ಕೆ ಸೀಮಿತಗೊಳಿಸುವ ತೀರ್ಮಾ ನವನ್ನೂ ಮಂಡಳಿ ಕೈಗೊಂಡಿದೆ.

ಈ ತೀರ್ಥಾಟನಾ ಋತು ಆರಂಭಗೊಂಡ ಬಳಿಕ ಅತೀ ಹೆಚ್ಚು ಎಂಬಂತೆ ನಿನ್ನೆ 96.853 ಭಕ್ತರು ಶಬರಿಮಲೆ ಕ್ಷೇತ್ರ ದರ್ಶನ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯನ್ನು ಪರಿಗಣಿಸಿ ಮಂಡಲ ಪೂಜೆ ಉತ್ಸವ ದಿನದಂದು ಮಾತ್ರವಲ್ಲ ಮಕರಜ್ಯೋತಿ ತೀರ್ಥಾಟನಾ ಋತು ತನಕ ಇನ್ನಷ್ಟು ಹೆಚ್ಚಿನ ನಿಯಂತ್ರಣ ಹೇರಲು ಮಂಡಳಿ ತೀರ್ಮಾನಿಸಿದೆ.

Leave a Reply

Your email address will not be published. Required fields are marked *

You cannot copy content of this page