ಶಬರಿಮಲೆಗೆ ಹರಿದು ಬರುತ್ತಿದೆ ಭಕ್ತರ ಮಹಾಪ್ರವಾಹ: ತಲೆಯೆತ್ತಿದ ಭದ್ರತಾ ಸಮಸ್ಯೆ

ಶಬರಿಮಲೆ: ಶಬರಿಮಲೆಗೆ ಹರಿದು ಬರುತ್ತಿರುವ ತೀರ್ಥಾಟಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಅದರಿಂದಾಗಿ ಜನವರಿ ೧೦ರಿಂದ ಸ್ಪೋಟ್ ಬುಕ್ಕಿಂಗ್ ಸೌಕರ್ಯವನ್ನು ಪೂರ್ಣವಾಗಿ ಹೊರತುಪಡಿಸಲಾ ಗಿದೆ. ಇದರಂತೆ ಪಂಪಾ ಸೇರಿದಂತೆ ಮುಜರಾಯಿ ಮಂಡಳಿಯ ಯಾವುದೇ ಕೇಂದ್ರಗಳಲ್ಲಿ ಸ್ಪೋಟ್ ಬುಕ್ಕಿಂಗ್ ಜ. ೧೦ರಿಂದ ಇರದು.

ಮಾತ್ರವಲ್ಲ, ಜನವರಿ ೧೪ ಮತ್ತು ೧೫ರಂದುವರ್ಚುವಲ್ ಕ್ಯೂ ಮಿತಿಯನ್ನೂ ಕಡಿತಗೊಳಿಸಲಾಗಿದೆ. ಸಾಧಾರಣವಾಗಿ ಮಕರಜ್ಯೋತಿಯ ಮೂರು ದಿನಗಳ ಮೊದಲು ಶಬರಿಮಲೆಗೆ ಆಗಮಿಸುವ ಭಕ್ತರು ಮಕರ ಜ್ಯೋತಿ ದರ್ಶನ ಹಾಗೂ ತಿರುವಾಭರಣ್ (ಶ್ರೀ ದೇವರ  ಚಿನ್ನದ ಒಡವೆ) ದರ್ಶನಕ್ಕಾಗಿ ಸನ್ನಿಧಾನ ಮತ್ತು ಪರಿಸರದಲ್ಲಿ ಮೊದಲೇ ಬೀಡು ಬಿಡುತ್ತಾರೆ. ಆದರೆ ಈಗ ಶಬರಿಮಲೆಗೆ ಈ ಹಿಂದಿನ ವರ್ಷಕ್ಕಿಂತಲೂ ಭಾರೀ ಹೆಚ್ಚು ಸಂಖ್ಯೆಯಲ್ಲಿ ಭಕ್ತ ಮಹಾಪ್ರವಾಹವೇ ಹರಿದು ಬರತೊಡಗಿದ್ದು, ಇದು ಭದ್ರತೆಯ ಮೇಲೂ ಪರಿಣಾಮ ಬೀರತೊಡಗಿದೆ. ಇದನ್ನೆಲ್ಲಾ ಪರಿಗಣಿಸಿ ಸ್ಪೋಟ್ ಬುಕ್ಕಿಂಗ್ ಸೌಕರ್ಯ ಸದ್ಯ ಹೊರತುಪಡಿಸಲಾಗಿದೆ.

ವರ್ಚುವಲ್ ಕ್ಯೂನಲ್ಲಿ ಬುಕ್ಕಿಂಗ್ ವ್ಯಾಪ್ತಿಯನ್ನು ಜನವರಿ ೧೪ರಂದು ೫೦,೦೦೦ಕ್ಕೆ ಇಳಿಸಲಾಗಿದೆ. ಇನ್ನು ಮಕರಜ್ಯೋತಿ ದಿನವಾದ ಜನವರಿ ೧೫ರಂದು ಅದನ್ನು ೧೪೦೦೦ಕ್ಕೆ ಇಳಿಸಲಾಗುವುದೆಂದು ಮುಜರಾಯಿ ಮಂಡಳಿ ತಿಳಿಸಿದೆ.

ಜನವರಿ ೧೪ ಮತ್ತು ೧೫ರಂದು ಇನ್ನಷ್ಟು ಭಕ್ತ ಮಹಾಪ್ರವಾಹವೇ ಹರಿದು ಬರಲಿರುವ ಸಾಧ್ಯತೆ ಇರುವುದರಿಂದಾಗಿ, ಈ ಎರಡು ದಿನಗಳಲ್ಲಿ ಮಕ್ಕಳು ಮತ್ತು ಮಹಿಳೆಯರು ಶಬರಿಮಲೆ ಯಾತ್ರೆಯನ್ನು ಹೊರತುಪಡಿಸಬೇಕೆಂಬ ವಿನಂತಿಯನ್ನೂ ಮುಜರಾಯಿ ಮಂಡಳಿ ಮಾಡಿಕೊಂಡಿದೆ.ಹರಿದು ಬರುತ್ತಿರುವ ಭಕ್ತ ಪ್ರವಾಹ ದಿನೇ ದಿನೇ ಹೆಚ್ಚಾಗುತ್ತಿರುವುದು, ಅದನ್ನು ನಿಯಂತ್ರಿಸಲು ಪೊಲೀಸರಾಗಲೀ ಮುಜುರಾಯಿ ಮಂಡಳಿಯ ಸಿಬ್ಬಂದಿಗಳಿಗಾಗಲೀ ಸಾಧ್ಯವಾಗದ ಸ್ಥಿತಿ ಈಗ ಇದೆ. ಆದ್ದರಿಂದ ಇದು ಒಂದು ಭಾರೀ ದೊಡ್ಡ ಭದ್ರತಾ ಸಮಸ್ಯೆಯಾಗಿಯೂ ತಲೆಯೆತ್ತತೊಡಗಿದೆ.

Leave a Reply

Your email address will not be published. Required fields are marked *

You cannot copy content of this page