ಶಬರಿಮಲೆಯಲ್ಲಿ ಅರವಣ ಕ್ಷಾಮ: ತೀರ್ಥಾಟಕರಿಗೆ ಅಸಮಾಧಾನ
ಶಬರಿಮಲೆ: ಶಬರಿಮಲೆಯಲ್ಲಿ ಅರವಣ ಪ್ರಸಾದ ಕ್ಷಾಮ ಮತ್ತೆ ಎದುರಾಗಿದ್ದು, ಇದು ತೀರ್ಥಾಟಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರಸ್ತುತ ಒಬ್ಬರಿಗೆ ಎರಡು ಟಿನ್ ಅರವಣ ಪ್ರಸಾದ ಮಾತ್ರವೇ ನೀಡಲಾಗುತ್ತಿದೆ. ಆದರೆ ಹೆಚ್ಚು ಟಿನ್ ಅರವಣ ಬೇಕಾದವರು ನಿರಾಸೆಗೊಳ್ಳುತ್ತಿದ್ದು, ಕೌಂಟರ್‌ನ ಮುಂದೆ ಇದು ಪ್ರತಿಭಟನೆಗೂ ಕಾರಣವಾಗಿದೆ. ಕಳೆದ ಆರು ದಿನಗಳಿಂದ ಅರವಣ ಕ್ಷಾಮ ಎದುರಾಗಿದೆ.
ಆದರೆ ಕ್ಷಾಮ ಪರಿಹರಿಸಲು ದೇವಸ್ವಂ ಮಂಡಳಿಗೆ ಇನ್ನೂ ಸಾಧ್ಯವಾಗಲಿಲ್ಲ. ಅರವಣ ತುಂಬಿಸುವ ಟಿನ್‌ನ ಅಭಾವವೇ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಡಿ. ೨೬ರಂದು ಹೊಸತಾಗಿ ಎರಡು ಕಂಪೆನಿಗಳಿಗೆ ಟಿನ್ ತಲುಪಿಸಲು ಗುತ್ತಿಗೆ ನೀಡಲಾಗಿತ್ತು. ೩೦ ಲಕ್ಷ ಟಿನ್ ದೇವಸ್ವಂ ಮಂಡಳಿ ಆಗ್ರಹಪಟ್ಟಿದ್ದು, ಆದರೆ ಇದಕ್ಕೆ ವಿಳಂಬ ಉಂಟಾಗಲಿದೆಯೆಂದು ಕಂಪೆನಿ ತಿಳಿಸಿರುವುದೇ ಸಂದಿಗ್ಧತೆಗೆ ಕಾರಣವಾಗಿದೆ.