ಶಬರಿಮಲೆಯಲ್ಲಿ ಮಂಡಲ ಪೂಜೆ ಮಧ್ಯಾಹ್ನ
ಶಬರಿಮಲೆ: ಶಬರಿಮಲೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಗೆ ಮಂಡಲಪೂಜೆ ಇಂದು ಮಧ್ಯಾಹ್ನ 12ರಿಂದ 12.30ರ ಮಧ್ಯೆ ನಡೆಯಲಿದೆ. ಮಂಡಲ ಪೂಜೆಯ ಪೂರ್ವಭಾವಿಯಾಗಿ ನಿನ್ನೆ ಸಂಜೆ ತಂಗಅಂಗಿ ತೊಡಿಸಿ ದೀಪಾರಾಧನೆ ನಡೆಸಲಾಯಿತು. ಮಂಡಲಪೂಜೆ ಕಾರ್ಯಕ್ರಮಗಳು ಪೂರ್ಣಗೊಂಡು ಇಂದು ರಾತ್ರಿ ಕ್ಷೇತ್ರ ಬಾಗಿಲು ಮುಚ್ಚಲಾಗುವುದು. ಬಳಿಕ ಮಕರಜ್ಯೋತಿ ಉತ್ಸವಕ್ಕಾಗಿ ಡಿ. 30ರಂದು ಸಂಜೆ ಮತ್ತೆ ತೆರೆಯಲಾಗುವುದು. ಇದೇ ವೇಳೆ ಇಂದು ಸಂಜೆ 7 ಗಂಟೆ ಬಳಿಕ ಪಂಪಾದಿಂದ ತೀರ್ಥಾಟಕರಿಗೆ ಮಲೆಯೇರಲು ಅನುಮತಿಯಿರು ವುದಿಲ್ಲ. ಇಂದು ವರ್ಚುವಲ್ ಕ್ಯೂ ಮೂಲಕ 60 ಸಾವಿರ ಮಂದಿಗೆ, ಸ್ಪೋಟ್ ಬುಕ್ಕಿಂಗ್ ಮೂಲಕ 5000 ಮಂದಿಗೆ ದರ್ಶನ ನಡೆಸಬಹುದಾಗಿದೆ.