ಶಾರದಾ ಎಯುಪಿ ಶಾಲೆಯಲ್ಲಿ ನಿವೃತ್ತರಿಗೆ ವಿದಾಯಕೂಟ

ಮೀಯಪದವು: ಮಂಜೇಶ್ವರ ಉಪಜಿಲ್ಲಾ ಮಟ್ಟದ ಎಲ್.ಪಿ, ಯು.ಪಿ, ಹೈಸ್ಕೂಲು ಹಾಗೂ ಹೈಯರ್ ಸೆಕೆಂಡರಿ ವಿಭಾಗಗಳಲ್ಲಿ ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಅಧ್ಯಾಪಕರು, ಮುಖ್ಯೋಪಾಧ್ಯಾಯರು, ಅಧ್ಯಾಪ ಕೇತರರು, ಸಿಬ್ಬಂದಿ ವರ್ಗ ಮೊದಲಾ ದವರಿಗೆ ಬೀಳ್ಕೊಡುಗೆ ಸಮಾರಂಭ ಐಲಶ್ರೀ ಶಾರದಾ ಎ.ಯು.ಪಿ ಶಾಲೆ ಯಲ್ಲಿ ಜರಗಿತು. ಮುಖ್ಯೋ ಪಾಧ್ಯಾ ಯರ ಬಳಗ ಹಾಗೂ ಕ್ಯೂ.ಐ.ಪಿ ನೇತೃತ್ವದಲ್ಲಿ ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿದಾಯಕೂಟ ಜರಗಿತು. ಉಪಜಿಲ್ಲಾ ಶಿಕ್ಷಣಾಧಿಕಾರಿ ರಾಜ ಗೋಪಾಲ ಕೆ. ಅಧ್ಯಕ್ಷತೆ ವಹಿಸಿದರು. ಜಿಲ್ಲಾ ವಿದ್ಯಾಭ್ಯಾಸ ಉಪನಿರ್ದೇಶಕ ಮಧುಸೂದನನ್ ಟಿ.ವಿ ಉದ್ಘಾಟಿಸಿ ಮಾತನಾಡಿದರು. ಈ ಶೈಕ್ಷಣಿಕ ವರ್ಷ ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ ವಿ ಅವರನ್ನು ಹಾಗೂ ಉಪಜಿಲ್ಲಾ ವಿದ್ಯಾಧಿüಕಾರಿ ರಾಜ ಗೋಪಾಲ ಕೆ ಯವರನ್ನು ಸ್ಮರಣಿಕೆ ನೀಡಿ ಜಿಲ್ಲಾ ವಿದ್ಯಾಭ್ಯಾಸ ಉಪ ನಿರ್ದೇಶಕ ಮಧುಸೂದನನ್ ಸನ್ಮಾನಿ ಸಿದರು. ಉಪಜಿಲ್ಲೆಯಿಂದ ಸುಮಾರು 29 ಮಂದಿ ನಿವೃತ್ತಿ ಹೊಂದುತ್ತಿರುವ ಅಧ್ಯಾಪಕ ಅಧ್ಯಾಪಿಕೆಯರು ಮುಖ್ಯೋ ಪಾಧ್ಯಾಯರು ಸಿಬ್ಬಂದಿ ವರ್ಗದವರನ್ನು ಗೌರವಿಸಲಾಯಿತು. ಎಚ್.ಎಂ ಫಾರಂ ಸೆಕ್ರೆಟರಿ ಶ್ಯಾಂಭಟ್ ಯು. ಪ್ರಾಸ್ತಾವಿಕ ನುಡಿದರು. ಡಯಟ್ ಫಾಕಲ್ಟಿ ಮಧು ಮೀಯಪದವು, ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ರಮೇಶ್, ಬಿ.ಪಿ.ಸಿ ಜೋಯ್ ಜಿ, ಜಿತೇಂದ್ರ ಎಸ್.ಎಚ್, ಶ್ರೀ ಶಾರದಾ ಬೋವಿ ಎ.ಯು.ಪಿ ಶಾಲೆ ಮುಖ್ಯ ಶಿಕ್ಷಕಿ ಜಲಜಾಕ್ಷಿ ಎ, ವಿವಿಧ ಅಧ್ಯಾಪಕ ಸಂಘಟನಾ ಪ್ರತಿನಿಧಿಗಳಾದ ಓ.ಎಂ.ರಶೀದ್, ಅರವಿಂದಾಕ್ಷ ಭಂಡಾರಿ, ರವೀಂದ್ರ, ಶಾಹಿದ್, ಜಯರಾಮ, ದೇವಿಪ್ರಸಾದ್, ರಾಧಾಕೃಷ್ಣ ಶುಭಾಶಂಸನೆಗೈದರು. ಸಂಘಟಕ ಸಮಿತಿ ಅಧ್ಯಕ್ಷ ಸುಕೇಶ ಎ ಸ್ವಾಗತಿಸಿ, ಸತ್ಯಪ್ರಕಾಶ ಇ.ಕೆ ವಂದಿಸಿದರು. ಮುಖ್ಯೋ ಪಾಧ್ಯಾಯರಾದ ಇಸ್ಮಾಯಿಲ್ ಮೀಯಪದವು ಹಾಗೂ ಉಣ್ಣಿಕೃಷ್ಣನ್ ಕಂದಲ್ ನಿರೂಪಿಸಿದರು.

Leave a Reply

Your email address will not be published. Required fields are marked *

You cannot copy content of this page