ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ
ತಿರುವನಂತಪುರ: ಕ್ರಿಸ್ಮಸ್ ಆಚರಣೆ ನಡೆಯುತ್ತಿದ್ದಂತೆ ಶಾಲಾ ವಿದ್ಯಾರ್ಥಿನಿಗೆ ತರಗತಿ ಕೊಠಡಿಯೊಳಗೆ ಹಾವು ಕಡಿದ ಘಟನೆ ನಡೆದಿದೆ. ನೆಯ್ಯಾಟಿಂಗರ ಬಳಿಯ ಚೆಂಗಲ್ ಸರಕಾರಿ ಯುಪಿ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ನೇಹ (12) ಎಂಬಾಕೆಗೆ ಹಾವು ಕಡಿದಿದೆ. ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದೆ. ಹಾವಿನ ಕಡಿತಕ್ಕೊಳಗಾದ ಬಾಲಕಿಯನ್ನು ಅಧ್ಯಾಪಕರು ಕೂಡಲೇ ನೆಯ್ಯಾಟಿಂಗರದ ಆಸ್ಪತ್ರೆಗೆ ತಲುಪಿಸಿದ್ದಾರೆ. ಬಾಲಕಿಗೆ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗಿಲ್ಲವೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇದೇ ವೇಳೆ ಕಡಿದ ಹಾವನ್ನು ಶಾಲಾ ಅಧಿಕಾರಿಗಳು ಹೊಡೆದು ಕೊಂದಿದ್ದಾರೆ.