ಶಾಲಾ ಪರಿಸರದಲ್ಲಿ ಮದ್ಯಪಾನ ಪ್ರಶ್ನಿಸಿದ ಯುವಕನನ್ನು ಇರಿದು ಕೊಲೆಗೈದ ಪ್ರಕರಣ: ಇಬ್ಬರ ಸೆರೆ
ತಲಪ್ಪಾಡಿ: ಶಾಲಾ ಪರಿಸರದಲ್ಲಿ ಮದ್ಯಪಾನವನ್ನು ಪ್ರಶ್ನಿಸಿದ ದ್ವೇಷದಿಂದ ಯುವಕನನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ ಇಬ್ಬರು ಸೆರೆಗೀಡಾಗಿದ್ದಾರೆ. ಸೋಮೇಶ್ವರ ಪಂಚಾಯತ್ ಮಾಜಿ ಸದಸ್ಯ ರವಿರಾಜ್ (೪೪), ಸೂರಜ್ (೪೦) ಎಂಬಿವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಮೊನ್ನೆ ರಾತ್ರಿ ಇಡೀ ನಾಡನ್ನು ಕಣ್ಣೀರಿನಲ್ಲಿ ಮುಳುಗಿಸುವ ಕೊಲೆಕೃತ್ಯ ನಡೆದಿದೆ. ಆರೋಪಿಗಳು ಕೊಲ್ಯ ಜೋಯ್ಲ್ಯಾಂಡ್ ಶಾಲೆ ಸಮೀಪ ಕುಳಿತು ಮದ್ಯ ಸೇವಿಸಿ, ಮದ್ಯದ ಬಾಟ್ಲಿಗಳನ್ನು ಒಡೆದು ಹಾಕಿದ್ದಾರೆ. ಸಂಬಂಧಿಕರ ಮನೆಗೆ ತೆರಳಿ ಮರಳುತ್ತಿದ್ದ ಸಾರಸ್ವತ ಕಾಲನಿಯ ವರುಣ್ ಅದನ್ನು ಕಂಡು ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಉಂಟಾದ ವಾಗ್ವಾದ ಮಧ್ಯೆ ಆರೋಪಿಗಳು ವರುಣ್ನ ಎದೆಗೆ ಚಾಕುವಿ ನಿಂದ ಇರಿದಿದ್ದಾರೆಂದು ಪೊಲೀ ಸರು ತಿಳಿಸಿದ್ದಾರೆ. ಗಂಭೀರ ಗಾಯಗೊಂಡ ವರುಣ್ ಸಮೀಪದಲ್ಲಿರುವ ತನ್ನ ಮನೆಗೆ ಓಡಿ ತಲುಪಿದ್ದರೂ ತಾಯಿಯ ಎದುರಿನಲ್ಲಿ ಬಿದ್ದು ಮೃತಪಟ್ಟಿ ದ್ದರು. ಕೊಲೆಗೀಡಾದ ವರುಣ್ ಮಂಗಳೂರು ಅರ್ಬನ್ ಡೆವಲ ಪ್ಮೆಂಟ್ ಅಥಾರಿಟಿ ಕಮಿಷ ನರ್ರ ಚಾಲಕನಾಗಿದ್ದಾರೆ.