ಶಾಲೆಯಲ್ಲಿ ಕಲೋತ್ಸವ ವೇಳೆ ದಾಂಧಲೆ: ಮುಖ್ಯ ಆರೋಪಿ ಸೆರೆ
ಕಾಸರಗೋಡು: ತಳಂಗರೆ ಸರಕಾರಿ ಮುಸ್ಲಿಂ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಲೋತ್ಸವದ ಕೊನೆಯ ದಿನ ದಾಂಧಲೆ ನಡೆಸಿ ವಿದ್ಯಾರ್ಥಿಗಳ ಮೇಲೆ ಹಲ್ಲೆಗೈದ ಪ್ರಕರಣದಲ್ಲಿ ಮುಖ್ಯ ಆರೋಪಿಯನ್ನು ಸೆರೆಹಿಡಿ ಯಲಾಗಿದೆ.
ಕಾಸರಗೋಡು ನಗರಠಾಣೆ ವ್ಯಾಪ್ತಿಯ ಮುಹಮ್ಮದ್ ಶಿಹ್‌ಬಾನ್ (19) ಎಂಬಾತ ಬಂಧಿತ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ ೯ರಂದು ಸಂಜೆ ಘಟನೆ ನಡೆದಿತ್ತು. ಮುಹಮ್ಮದ್ ಶಿಹ್‌ಬಾನ್ ನೇತೃತ್ವದಲ್ಲಿ ೨೦ರಷ್ಟು ಮಂದಿ ಶಾಲೆಗೆ ಅತಿಕ್ರಮಿಸಿ ನುಗ್ಗಿ ಪಿಟಿಎ ಉಪಾಧ್ಯಕ್ಷ ಹಾಗೂ ಕಚೇರಿಯ ನೌಕರನಿಗೆ ಅವಾಚ್ಯವಾಗಿ ನಿಂದಿಸಿ ಅವರಿಗೆ ಹಲ್ಲೆಗೈದು ಗಾಯಗೊಳಿಸಿದ ಆರೋಪದಂತೆ ಕೇಸು ದಾಖಲಿಸಲಾಗಿದೆ. ಆಡಿಟೋರಿ ಯಂಗೆ ನುಗ್ಗಿ ಪಟಾಕಿ ಸಿಡಿಸಿ, ಕಚೇರಿ ಕೊಠಡಿಯ ಕಿಟಿಕಿ, ಪೀಠೋಪಕರಣ ಗಳನ್ನು ನಾಶಗೊಳಿಸಿರುವುದಾಗಿ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವರು ಸೆರೆಗೀಡಾಗಲು ಬಾಕಿಯಿದ್ದು, ಅವರಿ ಗಾಗಿ ಶೋಧ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.