ಶಾಲೆಯಲ್ಲಿ ಕಳವು :ಕಳ್ಳರ ಗುರುತು ಪತ್ತೆ
ಕಾಸರಗೋಡು: ನೀಲೇಶ್ವರ ರಾಜಾಸ್ ಹೈಯರ್ ಸೆಕೆಂಡರಿ ಶಾಲೆಗೆ ಕಳ್ಳರು ನುಗ್ಗಿ ಮುಖ್ಯೋ ಪಾಧ್ಯಾಯರ ಕೊಠಡಿಯಿಂದ ೧೨೦೦೦ ರೂ. ನಗದು ಹಾಗೂ ಕ್ಯಾಮರಾವನ್ನು ಕಳವುಗೈದಿದ್ದಾರೆ. ಮಾತ್ರವಲ್ಲ ಈ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಸಿಸಿ ಟಿವಿಯ ಡಿವಿಆರ್‌ನ್ನು ಕಳಚಿ ತೆಗೆದು ಕಳ್ಳರು ಸಾಗಿಸಿದ್ದಾರೆ. ಶಾಲೆಗೆ ನುಗ್ಗುವ ಮೊದಲು ಕಳ್ಳರು ಅದರ ವಿದ್ಯುತ್ ಸಂಪರ್ಕವನ್ನು ಕಡಿದು ಹಾಕಿದ್ದಾರೆ. ಅಲ್ಲದೆ ಸಿಸಿ ಟಿವಿ ಕ್ಯಾಮರಾವೊಂ ದನ್ನು ಬೇರೆ ಕಡೆಗೆ ತಿರುಗಿಸಿ ಇಟ್ಟಿದ್ದಾರೆ.
ಶಾಲೆಯ ಮೂರು ಕೊಠಡಿಗಳ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಅದರೊಳಗಿದ್ದ ಮೂರು ಕಪಾಟುಗಳ ಸಾಮಗ್ರಿಗಳನ್ನೆಲ್ಲಾ ಹೊರಕ್ಕೆ ಎಸೆದು ಚೆಲ್ಲಾಪಿಲ್ಲಿಗೊಳಿಸಿದ್ದಾರೆ. ವಿಷಯ ತಿಳಿದ ನೀಲೇಶ್ವರ ಪೊಲೀಸರು ಸ್ಥಳಕ್ಕಾಗಮಿಸಿ ನಡೆಸಿದ ವ್ಯಾಪಕ ಶೋಧದಲ್ಲಿ ಆ ಶಾಲೆಯಿಂದ ಕಳವುಗೈ ಯ್ಯಲಾಗಿದ್ದ ಸಿಸಿ ಟಿವಿ ಕ್ಯಾಮರಾದ ಡಿವಿಆರ್‌ನ್ನು ಶಾಲೆಯ ಆವರಣಗೋಡೆ ಬಳಿ ಉಪೇಕ್ಷಿಸಿದ ಸ್ಥಿತಿಯಲ್ಲಿ ಪತ್ತೆಹಚ್ಚಿದ್ದಾರೆ. ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಸ್ಥಳಕ್ಕಾಗ ಮಿಸಿ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಈ ಬಗ್ಗೆ ಪ್ರಸ್ತುತ ಶಾಲೆಯ ಉಸ್ತುವಾರಿ ಮುಖ್ಯೋಪಾ ಧ್ಯಾಯಿನಿ ಎಂ.ವಿ. ರಮಾ ಈ ಬಗ್ಗೆ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಇದೇ ವೇಳೆ ಈ ಶಾಲೆಯಲ್ಲಿ ಕಳವು ನಡೆಸಿದ ಆರೋಪಿಗಳ ಬಗ್ಗೆಯೂ ಪೊಲೀಸರಿಗೆ ಸುಳಿವು ಲಭಿಸಿದೆ. ಕಳ್ಳರು ಕದ್ದು ಉಪೇಕ್ಷಿಸಿದ ಶಾಲೆಯ ಸಿಸಿ ಟಿವಿ ಕ್ಯಾಮರಾದ ಡಿವಿಆರ್‌ನಲ್ಲಿ ಕಳ್ಳರ ದೃಶ್ಯ ಪತ್ತೆಯಾಗಿದೆ. ಬೆರಳಚ್ಚು ತಜ್ಞರು ನಡೆಸಿದ ಪರಿಶೀಲನೆಯಲ್ಲಿ ಕಳ್ಳರದ್ದೆಂದು ಶಂಕಿಸಲಾಗುತ್ತಿರುವ ಬೆರಳಚ್ಚುಗಳು ಪತ್ತೆಯಾಗಿವೆ. ಇದರ ಜಾಡು ಹಿಡಿದು ಕಳ್ಳರ ಪತ್ತೆಗಾಗಿರುವ ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಕಳವು ಆರೋಪಿಗಳನ್ನು ಶೀಘ್ರ ಸೆರೆಹಿಡಿಯಲು ಸಾಧ್ಯವಾಗಲಿ ದೆಯೆಂಬ ನಿರೀಕ್ಷೆಯನ್ನು ಇದೇ ಸಂದರ್ಭದಲ್ಲಿ ಪೊಲೀಸರು ವ್ಯಕ್ತಪಡಿಸಿದ್ದಾರೆ.