ಬಂದ್ಯೋಡು: ಮಂಗಲ್ಪಾಡಿ ಪಂಚಾಯತ್ನ 12ನೇ ವಾರ್ಡ್ ನಲ್ಲಿ ಶೋಚನೀಯಾವಸ್ಥೆಯಲ್ಲಿದ್ದ ಇಚ್ಲಂಗೋಡು ಹುಬ್ಬಳ್ಳಿ ರಸ್ತೆಯನ್ನು ಶಾಸಕರ ಅಭಿವೃದ್ಧಿ ನಿಧಿಯಿಂದ 10 ಲಕ್ಷ ರೂ. ಬಳಸಿ ಪುನರುದ್ಧರಿಸಲಾ ಗಿದೆ. ಈ ರಸ್ತೆಯನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಪಂಚಾಯತ್ ಅಧ್ಯಕ್ಷೆ ರುಬೀನ, ಉಪಾಧ್ಯಕ್ಷ ಯೂಸಫ್ ಹೇರೂರು, ಅಸೀಸ್ ಮರಿಕೆ ಸಹಿತ ಹಲವರು ಭಾಗವಹಿಸಿದರು.