ಶಿವಬ್ರಾಹ್ಮಣ ಸಂಘ ವಾರ್ಷಿಕ ಮಹಾಸಭೆ
ಬದಿಯಡ್ಕ: ಕಾಸರಗೋಡು ಜಿಲ್ಲಾ ಶಿವ ಬ್ರಾಹ್ಮಣ ಸಂಘದ ವಾರ್ಷಿಕ ಮಹಾಸಭೆ ಪಿಲಿಕೂಡ್ಲು ಪಾರ್ವತಿ ನಿಲಯದಲ್ಲಿ ಜರಗಿತು. ಸಂಘದ ಉಪಾಧ್ಯಕ್ಷ ಶ್ರೀನಿವಾಸ ರಾವ್ ಅಧ್ಯಕ್ಷತೆ ವಹಿಸಿದ್ದರು. ವೈ.ಸತ್ಯನಾರಾ ಯಣ ಕಾಸರಗೋಡು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ ಸಂಘದ ಬೆಳ ವಣಿಗೆಯ ಬಗ್ಗೆ ಹಾಗೂ ಸದಸ್ಯತ್ವವನ್ನು ಹೆಚ್ಚಿಸುವ ಕುರಿತು ಚಿಂತನೆಯನ್ನು ನಡೆಸಬೇಕಿದೆ ಎಂದರು. ಹಿರಿಯ ಸದಸ್ಯ ಎಂ.ಈಶ್ವರ ರಾವ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ದರು. ಬಾಲಕೃಷ್ಣ ಶರ್ಮ ಹಾಗೂ ಸುಬ್ರಹ್ಮಣ್ಯ ಮೈಲ್ತೊಟ್ಟಿ ಶುಭಕೋರಿದರು. ಸೀತಾರಾಮ ರಾವ್ ಪಿಲಿಕೂಡ್ಲು ನೂತನವಾಗಿ ಚುನಾಯಿತರಾದ ಪದಾಕಾರಿಗಳ ಹೆಸರುಗಳನ್ನು ಪ್ರಕಟಿಸಿದರು. ನವನೀತ್ ನಿರೂಪಿಸಿದರು. ಗೋವಿಂದರಾಜ್ ಮೈಲ್ತೊಟ್ಟಿ ವಂದಿಸಿದರು.