ಶಿಶುದಿನ ರ‍್ಯಾಲಿ, ಸ್ಟುಡೆಂಟ್ ಪಾರ್ಲಿಮೆಂಟ್ ನಾಳೆ
ಕಾಸರಗೋಡು: ಜಿಲ್ಲಾ ಪಂಚಾ ಯತ್ ಹಾಗೂ ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಜಂಟಿಯಾಗಿ ನಾಳೆ ಶಿಶು ದಿನ ರ‍್ಯಾಲಿ ಹಾಗೂ ಸ್ಟುಡೆಂಟ್ ಪಾರ್ಲಿ ಮೆಂಟ್ ನಡೆಸಲಿದೆ. ವಿದ್ಯಾನಗರ್ ಅಸಾಪ್ ಸೆಂಟರ್ ಪರಿಸರದಲ್ಲಿ ಶಾಸಕ ಎನ್. ಎ. ನೆಲ್ಲಿಕುನ್ನು ರ‍್ಯಾಲಿಗೆ ಫ್ಲಾಗ್‌ಆಫ್ ಮಾಡುವರು. ವಿವಿಧ ಶಾಲೆಗಳಿಂದಾಗಿ ಸಾವಿರದಷ್ಟು ಮಕ್ಕಳು ವಿವಿಧ ಕಾರ್ಯಕ್ರಮಗಳನ್ನು ಪ್ರದರ್ಶಿ ಸುವರು. ವಿದ್ಯಾನಗರ ಸನ್‌ರೈಸ್ ಪಾರ್ಕ್‌ನಲ್ಲಿ ಜರಗುವ ಮಕ್ಕಳ ಪಾರ್ಲಿ ಮೆಂಟ್‌ನಲ್ಲಿ ಮಕ್ಕಳ ಪ್ರಧಾನಮಂತ್ರಿ ಯಾಗಿ ಆಯ್ಕೆಯಾದ ವೆಳ್ಳರಿಕುಂಡ್ ಸೈಂಟ್ ಎಲಿಜಬೆತ್ ಶಾಲೆಯ ಎಯ್‌ಬಲ್ ಜಿನ್ಸ್ ಉದ್ಘಾಟಿಸಿದರು. ಮಕ್ಕಳ ಅಧ್ಯಕ್ಷ ಮೇಲಾಂಗೋಡ್ ಜಿಯುಪಿ ಶಾಲೆಯ ವಸುಂದರ ಕೆ.ಎಸ್. ಅಧ್ಯಕ್ಷತೆ ವಹಿಸುವರು. ಮಕ್ಕಳ ವಿಪಕ್ಷ ನಾಯಕ ಕೀಕಾನ್ ಆರ್.ಎಂ.ಎ. ಜಿಯುಪಿಎಸ್‌ನ ಆವಣಿ ಎಂ. ಪ್ರಧಾನ ಭಾಷಣ ಮಾಡುವರು. ಮಕ್ಕಳ ಸ್ಪೀಕರ್ ಕರಿಚ್ಚೇರಿ ಜಿಯುಪಿಎಸ್‌ನ ಮಾಳವಿಕ ಪಿ, ಕೀಕಾನ ಆರ್‌ಎಂಎಂ ಜಿಯುಪಿಎಸ್‌ನ ಸಹನಾ ಎಂ. ರಾವ್ ಭಾಗವಹಿಸುವರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿ ಯಾಗಿದ್ದು, ಶಿಶುದಿನ ಸ್ಟಾಂಪ್ ಬಿಡು ಗಡೆಗೊಳಿಸುವರು. ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಶಿಶುದಿನ ಸಂದೇಶ ನೀಡುವರು. ಜಿಲ್ಲಾ ಪೊಲೀಸ್ ಅಧಿಕಾರಿ ಪಿ. ಬಾಲಕೃಷ್ಣನ್ ನಾಯರ್, ಶಿಕ್ಷಣಾಧಿ ಕಾರಿ ಟಿ.ವಿ. ಮಧುಸೂದನನ್, ವೈದ್ಯಾ ಧಿಕಾರಿ ಡಾ| ಎ.ವಿ. ರಾಮ್‌ದಾಸ್, ಡೆಪ್ಯುಟಿ ಕಲೆಕ್ಟರ್ ಪಿ. ಸುರ್ಜಿತ್, ವಾರ್ತಾಧಿಕಾರಿ ಎಂ. ಮಧುಸೂದನನ್, ಆರ್ಯ ಪಿ. ರಾಜ್, ಶೀಬಾ ಸಹಿತ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಮಾತನಾಡುವರು. ಇದೇ ವೇಳೆ ಶಿಶು ಕ್ಷೇಮಸಮಿತಿ ಆಯೋಜಿಸಿದ ವರ್ಣೋತ್ಸವದಲ್ಲಿ ಜಯಗಳಿಸಿದವರಿಗೆ ಬಹುಮಾನ ವಿತರಿಸಲಾಗುವುದು.