ಶುಚಿತ್ವ ಮಹತ್ವ: ಹೊಸ ಬಸ್ ನಿಲ್ದಾಣದಲ್ಲಿ ಎರಡು ವಾರದಿಂದ ಮಲಿನಜಲ ಪ್ರವಾಹ
ಕಾಸರಗೋಡು: ಶುಚಿತ್ವ ಮಹತ್ವ ಎಂಬ ಸಂದೇಶವಿಲ್ಲದಿರುತ್ತಿದ್ದರೆ ಶುಚಿತ್ವ ಕಾಯ್ದುಕೊಳ್ಳಲು ಬೇಕಾಗಿ ನಿಯೋಜಿಸಿದ ಸರಕಾರಿ ವ್ಯವಸ್ಥೆಗಳು ಏನು ಮಾಡುತ್ತಿತ್ತು ಎಂದು ಯಾರಾದರೂ ಚಿಂತಿಸಿದ್ದಾರೆಯೇ? ಇಲ್ಲದಿದ್ದರೆ ಅದಕ್ಕಿರುವ ಅವಕಾಶ ಈ ವ್ಯವಸ್ಥೆಗಳು ಜನದಟ್ಟಣೆ ಹೆಚ್ಚಿರುವ ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ಏರ್ಪಡಿಸಿದೆ. ಬಸ್ ನಿಲ್ದಾಣದ ಶಾಪಿಂಗ್ ಕಾಂಪ್ಲೆಕ್ಸ್ನ ಹೋಟೆಲ್ಗಳಿಂದ ಹಾಗೂ ಇತರ ಕಡೆಗಳಿಂದ ಮಲಿನಜಲ ಹರಿಯಬಿಡುವ ಪೈಪ್ ಎರಡು ವಾರಕ್ಕೂ ಹೆಚ್ಚಾಗಿ ಬಿರುಕು ಬಿಟ್ಟು ನೀರು ಹೊರಗೆ ಹರಿಯುತ್ತಿದೆ. ಆಟೋ ನಿಲ್ದಾಣದ ಪರಿಸರದಲ್ಲೂ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಆಗಮಿಸುವ ದಾರಿಯಲ್ಲಿಯೂ ಮಲಿನ ಜಲ ಹರಿಯುತ್ತಿದೆ. ಜೊತೆಗೆ ದುರ್ವಾಸನೆಯೂ.
ಬಸ್ನಿಲ್ದಾಣ ನಗರಸಭೆಯ ಸೊತ್ತು ಆದ ಕಾರಣ ಅವರಿಗೆ ಆಟೋ ಚಾಲಕರು ಹಾಗೂ ಈ ವಿಷಯವನ್ನು ತಿಳಿಸಿದರು. ಮನವಿ ಸ್ವೀಕರಿಸಿ ಅವರು ಅದನ್ನು ತೆಗೆದಿರಿಸಿದರು. ಆ ಬಳಿಕ ಪೊಲೀಸರಿಗೂ ಮಲಿನೀಕರಣ ನಿಯಂತ್ರಣ ಬೋರ್ಡ್ಗೂ, ಶುಚಿತ್ವ ಮಿಷನ್ಗೂ ಇವರು ದೂರು ನೀಡಿದರು. ಕೆಲವರು ಮನವಿ ಲಭಿಸಿದ ಕೂಡಲೇ ವಾಹನದಲ್ಲಿ ತಲುಪಿ ಬಸ್ ನಿಲ್ದಾಣದ ದುರವಸ್ಥೆಯನ್ನು ಮನಗಂಡರು. ಶುಚಿತ್ವ ಮಿಷನ್ನ ಮೂರುನಾಲ್ಕು ಮಂದಿ ತಲುಪಿ ಮಲಿನ ಜಲ ಹರಿಯುತ್ತಿರುವುದನ್ನು ಹಾಗೂ ಅದರ ಮೂಲವನ್ನು ಸರಿಯಾಗಿ ವೀಕ್ಷಿಸಿದರು. ಆದರೆ ಇದ್ಯಾವುದೂ ಸರಿಯಾಗದೆ ಜನರು ಇಂತಃ ಸ್ಥಿತಿಯನ್ನು ಅನುಭವಿಸಲು ಯಾವತ್ತೋ ಸಿದ್ಧವಾಗಿದ್ದಾರೆ.